Mysore
16
clear sky

Social Media

ಬುಧವಾರ, 10 ಡಿಸೆಂಬರ್ 2025
Light
Dark

ಸರಿಗಮಪ ಖ್ಯಾತಿಯ ಅಂಧ ಗಾಯಕಿ ಮಂಜಮ್ಮ ಅನಾರೋಗ್ಯದಿಂದ ನಿಧನ

ತುಮಕೂರು: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸರಿಗಮಪ ಖ್ಯಾತಿಯ ಅಂಧ ಗಾಯಕಿ ಮಂಜಮ್ಮ ಅವರು ನಿಧನರಾಗಿದ್ದಾರೆ.

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಮಂಜಮ್ಮ ಅವರು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕಳೆದ ತಡರಾತ್ರಿ ನಿಧನರಾಗಿದ್ದಾರೆ.

ದೇವಸ್ಥಾನವೊಂದರ ಮುಂದೆ ಹಾಡು ಹಾಡುತ್ತಿದ್ದ ಅಂಧ ಸಹೋದರಿಯರಾದ ಮಂಜಮ್ಮ-ರತ್ನಮ್ಮ ಅವರು, ಸರಿಗಮಪ ಶೋನಲ್ಲಿ ಭಾಗಿಯಾಗಿ ಜನಪ್ರಿಯತೆ ಗಳಿಸಿದ್ದರು.

ಇದೀಗ ಮಂಜಮ್ಮ ನಿಧನರಾಗಿರುವ ಹಿನ್ನೆಲೆಯಲ್ಲಿ ಅಕ್ಕ ರತ್ನಮ್ಮ ಕಂಗಾಲಾಗಿದ್ದಾರೆ.

ಇನ್ನು ಇಬ್ಬರಿಗೂ ಹುಟ್ಟಿನಿಂದ ಕಣ್ಣಿಲ್ಲ. ಸಂಗೀತ ಕಲಿಯದ ಅವರು ಹೊಟ್ಟೆಪಾಡಿಗಾಗಿ ಹಾಡಲು ಆರಂಭಿಸಿದ್ದರು. ಅದೇ ಅವರ ವೃತ್ತಿಯೂ ಆಗಿತ್ತು. ಇದೀಗ ಮಂಜಮ್ಮ ನಿಧನರಾಗಿದ್ದು, ರತ್ನಮ್ಮರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ ಎನ್ನಲಾಗುತ್ತಿದೆ.

ಇನ್ನು ಜೀವನ ನಡೆಸಲು ಸೂರು ಇಲ್ಲದ ಇವರಿಗೆ ನಟ ಜಗ್ಗೇಶ್‌ ತುಮಕೂರಿನಲ್ಲಿ ಒಂದು ಮನೆಯನ್ನು ಕಟ್ಟಿಸಿಕೊಟ್ಟು, ಅದಕ್ಕೆ ಪರಿಮಳ ನಿಲಯ ಎಂದು ಹೆಸರಿಟ್ಟಿದ್ದರು.

ಇದಲ್ಲದೇ ಅರ್ಜುನ್‌ ಜನ್ಯ ಅವರು ನನಗೆ ಶಕ್ತಿ ಇರುವ ತನಕ ಈ ಸಹೋದರಿಯರ ಕುಟುಂಬದ ತಿಂಗಳ ರೇಷನ್‌ ವ್ಯವಸ್ಥೆ ನನ್ನದು ಎಂದು ಹೇಳಿದ್ದರು.

Tags:
error: Content is protected !!