Mysore
19
few clouds

Social Media

ಸೋಮವಾರ, 12 ಜನವರಿ 2026
Light
Dark

ಧರ್ಮದ ಆಧಾರದ ಮೇಲೆ ಪ್ರಚೋದನೆ ಮಾಡುವುದೇ ಬಿಜೆಪಿಯ ಕೆಲಸ: ದಿನೇಶ್‌ ಗುಂಡೂರಾವ್‌

ಕೊಳ್ಳೇಗಾಲ : ಧರ್ಮದ ಆಧಾರದ ಮೇಲೆ ಪ್ರಚೋದನೆ ಮಾಡುವುದೇ ಬಿಜೆಪಿಯ ಕೆಲಸ ಎಂದು ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಅವರು ತಿರುಗೇಟು ನೀಡಿದರು.

ಪಟ್ಟಣದಲ್ಲಿ ಸೋಮವಾರ ಆರೋಗ್ಯ ಇಲಾಖೆಯಿಂದ ಆಯೋಜಿಸಿರುವ ಬೃಹತ್ ಆರೋಗ್ಯ ಮೇಳದಲ್ಲಿ ಪಾಲ್ಗೊಳ್ಳಲು ಆಗಮಿಸಿ, ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ವಿವಾದ ಸಂಬಂಧ ಮಾತನಾಡಿದರು.

ಭಾವನಾತ್ಮಕವಾಗಿ ಜನರನ್ನು ಕೆರಳಿಸುವುದೇ ಬಿಜೆಪಿಯವರ ಕೆಲಸ. ಈ ಮೂಲಕ ಅವರು ಅತ್ಯಂತ ಕೀಳು ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಉದ್ದೇಶಪೂರ್ವಕವಾಗಿ ಘಟನೆ ಸೃಷ್ಟಿಸಿ ಕೋಮುವಾದಿ ಬಣ್ಣ ಕಟ್ಟಲಾಗುತ್ತಿದೆ. ಜನರನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಜನರ ಭಾವನೆಗಳ ಮೇಲೆ ಸಂಚಾರ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಧಾರ್ಮಿಕ ಚಿಂತನೆ ಎಲ್ಲರಲ್ಲೂ ಇದೆ. ನಮ್ಮದು ಜಾತ್ಯತೀತ ರಾಷ್ಟ್ರ. ಹಿಂದೂ, ಕ್ರೈಸ್ತ, ಹಿಂದೂ ರಾಷ್ಟ್ರ ಮಾಡುತ್ತೇನೆ ಎಂಬುದು ತಪ್ಪು. ಸರ್ಕಾರ ತಪ್ಪು ಮಾಡಿದರೆ ಎತ್ತಿ ತೋರಿಸುವ ಬದಲು ವಿವಾದ ಸೃಷ್ಟಿಸುವುದೇ ಇವರ ಕೆಲಸ ಎಂದು ಕಿಡಿಕಾರಿದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ಒಂದು ಪೈಸೆ ಬರ ಪರಿಹಾರ ಬಿಡುಗಡೆ ಮಾಡಿಲ್ಲ. ನಮ್ಮ ರಾಜ್ಯಕ್ಕೆ ತೆರಿಗೆ ಹಣವೂ ಬರುತ್ತಿಲ್ಲ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಪ್ರತಿ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡುತ್ತಿಲ್ಲ ಎಂದು ದೂರಿದರು.

ನಿರುದ್ಯೋಗ, ಬೆಲೆ ಏರಿಕೆ ಬಗ್ಗೆ ಮಾತನಾಡುತ್ತಿಲ್ಲ. ದಾರಿ ತಪ್ಪಿಸುವುದು. ರಾಜಕೀಯಕ್ಕಾಗಿ ಜನರನ್ನು ದಾರಿ ತಪ್ಪಿಸಬಾರದು. ಕೋಮು ಭಾವನೆ ಕೆರಳಿಸಬಾರದು ಎಂದರು.

ಹಿಂದುಗಳ ಜೊತೆಗೆ ಎಲ್ಲ ಜನರನ್ನು ಪ್ರೀತಿಸಬೇಕು. ಎಚ್.ಡಿ.ಕುಮಾರಸ್ಬಾಮಿ ಅವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದ ಅವರಿಗೆ ಹಿಂದುಗಳ ಬಗ್ಗೆ ಪ್ರೀತಿ ಹೆಚ್ಚಾಗಿರಬಹುದು ಎಂದು ವ್ಯಂಗ್ಯವಾಡಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!