Mysore
24
few clouds

Social Media

ಶುಕ್ರವಾರ, 27 ಮಾರ್ಚ್ 2026
Light
Dark

ರಾಗಾ ಹೋದ ಕಡೆಯಲ್ಲ ಬಿಜೆಪಿಗೆ ಗೆಲುವು: ಪ್ರಹ್ಲಾದ್‌ ಜೋಶಿ

ಹುಬ್ಬಳ್ಳಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರಚಾರಕ್ಕೆ ಹೋದ ಕಡೆಯಲ್ಲ ಬಿಜೆಪಿ ಗೆಲುವು ಸಾಧಿಸಿದೆ ಎಂದು ಕೇಂದ್ರ ಸಚಿವ ಪಹ್ಲಾದ್‌ ಜೋಶಿ ಹೇಳಿದ್ದಾರೆ.

ನಗರದಲ್ಲಿಂದು (ಏ.೧೩) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಾರಿ ಚುನಾವಣಾ ಸ್ಪರ್ಧೇಯಲ್ಲು ಕಾಂಗ್ರೆಸ್‌ ಎಲ್ಲೆಲ್ಲಿ ರಾಹುಲ್ ಗಾಂಧಿ ಅವರಿಂದ ಪ್ರಚಾರ ಮಾಡಿಸುತ್ತೀರೋ ಅಲ್ಲೆಲ್ಲಾ ಬಿಜೆಪಿ ಹೆಚ್ಚಿನ ಸೀಟುಗಳು ಬರಲಿವೆ. 2019ರ ಲೋಕಸಭಾ ಚುನಾವಣೆಯಲ್ಲಿ 303 ಸೀಟುಗಳು ಬಂದಿವೆ. ಈ ಬಾರಿ ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿಗೆ 375 ಸೀಟ್‌ಗಳು ಸಿಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಇನ್ನು ಸಚಿವ ಪ್ರಿಯಾಂಕ್‌ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಾತನಾಡಿರುವ ವಿಷಯಕ್ಕೆ ಸಂಬಂಧಿಸಿದಂತೆ, ಖರ್ಗೆ ಅವರು ರಾಜಕೀಯ ತೆವಲಿಗಾಗಿ ಪ್ರಧಾನಿ ವಿರುದ್ಧ ಮಾತನಾಡುತ್ತಿದ್ದಾರೆ. ನಿಮ್ಮ ತಂದೆ ಅಧ್ಯಕ್ಷರಾಗೋಕೆ ಏನೆಲ್ಲಾ ಮಾಡಿದ್ದಾರೆ ಅದನ್ನು ಮೊದಲು ನೋಡಿ ಎಂದು ತಿರುಗೇಟು ನೀಡಿದ್ದಾರೆ.

Tags:
error: Content is protected !!