Mysore
28
scattered clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಸೆಪ್ಟೆಂಬರ್.‌1ರಂದು ಬಿಜೆಪಿಯಿಂದ ಧರ್ಮಸ್ಥಳ ಚಲೋ: ಬಿ.ವೈ.ವಿಜಯೇಂದ್ರ

ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರಕರಣದಲ್ಲಿ ವ್ಯವಸ್ಥಿತ ಷಡ್ಯಂತ್ರ ನಡೆದಿರುವುದರಿಂದ ರಾಜ್ಯ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಂಶ ಹೊರಬರಲು ಅನುಕೂಲವಾಗುವಂತೆ ರಾಷ್ಟ್ರೀಯ ತನಿಖಾ ದಳ(ಎನ್‍ಐಎ)ಕ್ಕೆ ವಹಿಸಬೇಕೆಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.

ಮೇಲ್ನೋಟಕ್ಕೆ ಈ ಪ್ರಕರಣದ ಹಿಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಷಡ್ಯಂತ್ರ ಅಡಗಿರುವುದು ಕಂಡುಬರುತ್ತದೆ. ಎಸ್‍ಐಟಿ ಸರ್ಕಾರದಡಿಯೇ ಕಾರ್ಯ ನಿರ್ವಹಿಸುವುದರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ. ಪ್ರಕರಣದ ಸೂತ್ರಧಾರಿಗಳನ್ನು ಬಂಧಿಸದಂತೆ ಒತ್ತಡ ಹೇರುವ ಸಾಧ್ಯತೆ ಇರುತ್ತದೆ. ಹೀಗಾಗಿ ಎನ್‍ಐಎಗೆ ವಹಿಸಬೇಕೆಂದು ಆಗ್ರಹ ಮಾಡಿದರು.

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣವನ್ನು ಸೂಕ್ತ ತನಿಖೆಗೆ ಒತ್ತಾಯಿಸಿ ಸೆಪ್ಟೆಂಬರ್ 01 ರಂದು ಸೋಮವಾರ ಧರ್ಮಸ್ಥಳ ಚಲೋ ನಡೆಸಲಿದೆ. ಷಢ್ಯಂತ್ರ ತನಿಖೆಯನ್ನು ಎನ್‍ಐಎಗೆ ವಹಿಸುವಂತೆ ಆಗ್ರಹಿಸಿ ಧರ್ಮಸ್ಥಳ ಚಲೋ ಇದಾಗಿದೆ. ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಧರ್ಮಸ್ಥಳ ಚಲೋದಲ್ಲಿ ಭಾಗವಹಿಸ್ತಾರೆ. ಎಲ್ಲ ಕ್ಷೇತ್ರಗಳಿಂದಲೂ ಭಕ್ತರು, ಹಿಂದೂಗಳಿಂದ ಧರ್ಮಸ್ಥಳಕ್ಕೆ ಚಲೋ ನಡೆಯಲಿದೆ. ಅಂದು ಬೆಳಗ್ಗೆ ಅವರವರ ಊರುಗಳಲ್ಲಿ ಪೂಜೆ ಮಾಡಿಕೊಂಡು ಧರ್ಮಸ್ಥಳ ಹೊರಡಬೇಕು. ಮಧ್ಯಾಹ್ನ ಧರ್ಮಸ್ಥಳದಲ್ಲಿ ಧರ್ಮಜಾಗೃತಿ ಇರಲಿದೆ ಎಂದು ಹೇಳಿದರು.

ಧರ್ನಸ್ಥಳ ಭಕ್ತರು, ಹಿಂದೂಗಳು, ಹಿಂದೂ ಸಮಾಜದ ಪರವಾಗಿ ಸಿಎಂಗೆ ಮನವಿ ಮಾಡುವುದು ಏನೆಂದರೆ, ಸರ್ಕಾರಕ್ಕೆ ಕಳಂಕ ಅಂಟಿದೆ, ಈ ಕಳಂಕದಿಂದ ಹೊರಗೆ ಬರಬೇಕಿದೆ. ದುಷ್ಕೃತ್ಯದ ಹಿಂದೆ ಯಾರಿದ್ದಾರೆ ಎಂದು ಸರಿಯಾದ ರೀತಿಯಲ್ಲಿ ತನಿಖೆ ನಡೆಯಬೇಕಿದೆ.

ಕೆಲ ದುಷ್ಟ ಶಕ್ತಿಗಳು ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡುತ್ತಿವೆ. ಈ ಪ್ರರಕಣದ ನಂತರ ಬೇರೆ ದೇವಸ್ಥಾನಗಳ ಮೇಲೂ ಅಪಪ್ರಚಾರ ಆಗಬಹುದು. ಇದರ ತನಿಖೆ ಸರಿಯಾಗಿ ಆಗಬೇಕು. ಸರ್ಕಾರ ನಿಷ್ಪಕ್ಷಪಾತ ತನಿಖೆಗೆ ಎನ್‍ಐಎಗೆ ವಹಿಸಬೇಕು ಎಂದು ಹೇಳಿದರು.

ಧರ್ಮಸ್ಥಳ ವಿರುದ್ಧ ಷಢ್ಯಂತ್ರದ ತನಿಖೆ ನಡೆಸಿದಾಗ ಮಾತ್ರ ಭಕ್ತರಲ್ಲೂ ವಿಶ್ವಾಸ ಮೂಡುತ್ತದೆ. ಈ ಪ್ರಕರಣದ ಬಗ್ಗೆ ಮೊದಲು ಎಸ್‍ಐಟಿ ಮಾಡುವುದಿಲ್ಲ ಎಂದು ಹೇಳಿದ ಮಾರನೇಯ ದಿನ ಘೋಷಣೆ ಮಾಡಿದರು. ರಾತ್ರೋರಾತ್ರಿ ಸಿಎಂ ನಿಲುವು ಬದಲಾಯಿತು, ಯಾರ ಒತ್ತಡ ಇತ್ತು? ಧರ್ಮಸ್ಥಳ ಬಗ್ಗೆ ಪರಾಮರ್ಶೆ ಮಾಡದೇ ರಾತ್ರೋರಾತ್ರಿ ತಮ್ಮ ನಿರ್ಧಾರ ಬದಲಾಯಿಸಿಕೊಂಡರು? ಇದೆಲ್ಲವೂ ಬಹಿರಂಗ ಆಗಬೇಕಾಗುತ್ತದೆ ಎಂದರು.

Tags:
error: Content is protected !!