Mysore
29
few clouds

Social Media

ಮಂಗಳವಾರ, 27 ಜನವರಿ 2026
Light
Dark

ಗ್ಯಾರಂಟಿ ಹೊರೆ ತಪ್ಪಿಸಲು ಸಾರಿಗೆ ಇಲಾಖೆ ಆಸ್ತಿ ಮಾರಾಟ: ಬಿಜೆಪಿ ಕಿಡಿ

ಬೆಂಗಳೂರು: ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರಕ್ಕೆ ಆರ್ಥಿಕ ಹೊರೆಯಾಗುತ್ತಿದ್ದು, ಈ ಹೊರೆಯನ್ನು ತಗ್ಗಿಸಲು ಸಾರಿಗೆ ಇಲಾಖೆಯ ಆಸ್ತಿಗಳನ್ನು ಮಾರಾಟ ಮಾಡಲು ಮುಂದಾಗಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

ಸಾರಿಗೆ ಇಲಾಖೆಗೆ ನೀಡಬೇಕಾದ ಸುಮಾರು 7154 ಕೋಟಿ ರೂ. ಹಣವನ್ನು ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿದೆ. ಸಾರಿಗೆ ಇಲಾಖೆಗೆ ಕೊಡಬೇಕಾದ ಹಣ ಶಕ್ತಿ ಯೋಜನೆಗೆ ಬಳಸಿದ್ದಾರೆ. 2023-24 ಸಾಲಿನಲ್ಲಿ 1480 ಕೋಟಿ ರೂ. ಬಾಕಿ ಇದೆ. 2024-25ನೇ ಸಾಲಿನಲ್ಲಿ 360 ಕೋಟಿ ರೂ. ಬಾಕಿ ಇದ್ದು, ಈ ಹಣವನ್ನು ಸಾರಿಗೆ ನಿಗಮಕ್ಕೆ ನೀಡದೆ ಯೋಜನೆಗಳಿಗೆ ಬಳಸಿಕೊಂಡಿದ್ದಾರೆ. ಹೀಗೆ ರಾಜ್ಯ ಸರ್ಕಾರ ಗ್ಯಾರಂಟಿಗಾಗಿ ಸಾರಿಗೆ ಇಲಾಖೆಯನ್ನು ಮಾರಾಟಕಿಟ್ಟಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಭವಿಷ್ಯನಿಧಿ, ನಿವೃತ್ತ ನೌಕರರಿಗೆ ನೀಡಬೇಕಾದ ಹಣ ಬಾಕಿ, ಇಂಧನ ಇತರೆ ಬಿಲ್‌ಗಳು ಸೇರಿದಂತೆ 5614 ಕೋಟಿ. ರೂ ಹಣ ಬಾಕಿ ಉಳಿಸಿಕೊಂಡಿದೆ ಎಂದು ಗಂಭೀರ ಆರೋಪ ಮಾಡಿದೆ.

ಶಾಲಿನಿ ರಜನೀಶ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರತಿ ದಿನದ ಇಂಧನ ವೆಚ್ಚವೇ 9.5 ಕೋಟಿ ರೂ ಆಗುತ್ತಿದೆ. ಸಿಬ್ಬಂದಿ ವೇತನ ಸೇರಿ 3650 ಕೋಟಿ ಹೊರೆಯಾಗುತ್ತಿದ್ದು, ಶೇ.15ರಷ್ಟು ಪ್ರಯಾಣ ಹೆಚ್ಚಿಸುವಂತೆ ಶಾಲಿನಿ ನೇತೃತ್ವದ ಸಭೆಯಲ್ಲಿ ನಿರ್ಧರಿಸಿದ್ದಾರೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಿದ್ದಾರೆ ಎಂದು ಬಿಜೆಪಿ ಹೇಳಿದೆ.

ದರ ಹೆಚ್ಚಿಸಿದರೂ ಇನ್ನು 1800 ಕೋಟಿ ನಷ್ಟವಾಗಲಿದೆ. ಹಾಗಾಗಿ ನಿಗಮದ 200 ಎಕರೆ ಭೂಮಿಯನ್ನು ಆದಾಯ ಹೆಚ್ಚು ಮಾಡಲು ಬಳಸಿಕೊಳ್ಳಲು ಶಾಲಿನಿ ನೇತೃತ್ವದ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ನಿಗಮದ ಆದಾಯ ಹೆಚ್ಚಿಸಲು ಭೂಮಿಯನ್ನು ಖಾಸಗಿಗಳಿಗೆ ಮಾರಾಟ ಮಾಡಬಾರದು ಎಂದು ಬಿಜೆಪಿ ಆಗ್ರಹಿಸಿದೆ.

Tags:
error: Content is protected !!