ಬೆಳಗಾವಿ: ಪರ್ಸೆಂಟೇಜ್‌ಗಾಗಿ ಡಿ.ಕೆ.ಶಿವಕುಮಾರ್ ನೀರಾವರಿ ಮಂತ್ರಿಯಾಗಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ಈ ಬಗ್ಗೆ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿಯಾಗಿದ್ದಾರೆ. ನೀರಾವರಿ ಮಂತ್ರಿ ಆಗುವ ಉದ್ದೇಶ ಏನಿತ್ತು? ಪರ್ಸೆಂಟೇಜ್‌ಗಾಗಿ ಡಿಕೆಶಿ ನೀರಾವರಿ ಮಂತ್ರಿಯಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಕೋವಿಡ್ ವೇಳೆ ಭ್ರಷ್ಟಾಚಾರ ನಡೆದಿದೆ ಎಂದು ಈಗ ಮಾತನಾಡುತ್ತಿದ್ದಾರೆ. ಅದೇ ಡಿಕೆಶಿ ಹಳೆ ಬಿಲ್ಲು ನೀಡಲು 10% ಹಣ ಹೊಡೆಯುತ್ತಿದ್ದಾರೆ. ಬಿಬಿಎಂಪಿಯಲ್ಲಂತೂ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದರು.
ಇನ್ನು ಕಳೆದ 60 ವರ್ಷಗಳಿಂದ ಕೃಷ್ಣ ಮೇಲ್ದಂಡೆ ಯೋಜನೆ ಪೂರ್ಣಗೊಂಡಿಲ್ಲ. ಈ ಯೋಜನೆ ಪೂರ್ಣಗೊಳ್ಳದೇ ಇರಲು ಎಲ್ಲಾ ಸರ್ಕಾರಗಳು ಕಾರಣ ಎಂದು ಕಿಡಿಕಾರಿದರು.