ಬೆಂಗಳೂರು : ಮುಡಾ ಹಗರಣವನ್ನು ಸಿಬಿಐಗೆ ಯಾಕೆ ಕೊಡಬೇಕು..? ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿ ನಾಯಕರಿಗೆ ಇದಿಯಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿರುವ ಆರೋಪದ ತನಿಖೆಯನ್ನ ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ಒತ್ತಾಯ ಮಾಡುತ್ತಿರುವ ವಿಚಾರಕ್ಕೆ ನಗರದ ಕಂಠೀರವ ಕ್ರೀಡಾಂಗಣ ಬಳಿ ಮಾತನಾಡಿದ ಸಿಎಂ,ಪ್ರಕರಣದ ತಬಿಖೆಯನ್ನ ಸಿಬಿಐಗೆ ನೀಡಬೇಕು ಎಂದು ಹೇಳಲು ಬಿಜೆಪಿಗೆ ಯಾವ ನೈತಿಕತೆ ಇದೆ. ಪ್ರಕರಣದ ತನಿಖೆಯನ್ನ ನಡೆಸಲು ಹಿರಿಯ ಐಎಎಸ್ ಅಧಿಕಾರಿಯೊಬ್ಬರಿಗೆ ಸೂಚಿಸಲಾಗಿದೆ. ಬಿಜೆಪಿ ಅವರು ಹೇಳ್ತಾರೆ ಎಂತ ನೀವು ಮಾಧ್ಯಮದವರು ಹೇಳ್ಬೇಡಿ. ಸಿಬಿಐ ಗೆ ಕೊಡುವ ಅವಶ್ಯಕತೆ ಇದಿಯಾ ಅಂತ ಯೋಚಿಸಿ, ನಮ್ಮ ಜಮೀನು ಸ್ವಾಧೀನ ಪಡಿಸಿಕೊಂಡಿದ್ದಾರೆ. ಸ್ವಾಧೀನ ಪಡಿಸಿಕೊಂಡ ಜಮೀನಿನಲ್ಲಿ ೫೦:೫೦ ಅನುಪಾತದಲ್ಲಿ ಸೈಟು ಹಂಚಿಕೆಯಾಗಬೇಕು ಎಂದು ಯಾವ ಸರ್ಕಾರ ಕಾನೂನು ರೂಪಿಸಿತ್ತು ಎಂದು ಪ್ರಶ್ನೆ ಮಾಡಿದರು.
ಅಲ್ಲದೆ ಮುಡಾ ಸೈಟ್ ಹಂಚಿಕೆ ಪ್ರಕರಣದಲ್ಲಿ ಈಗಾಗಲೇ ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ. ತನಿಖೆಗೆ ಆದೇಶ ನೀಡಲಾಗಿದೆ. ವಿವಾದಕ್ಕೀಡಾಗಿರುವ ಸೈಟ್ ಗಳನ್ನ ಅಮಾನತ್ತಿಲ್ಲಿಡಲಾಗಿದೆ ಮತ್ತು ಸೈಟು ಹಂಚಿಕೆಯಾದಾಗ ಮುಡಾದಲ್ಲಿದ್ದ ಅಧಿಕಾರಿಗಳನ್ನ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು.





