Mysore
18
scattered clouds

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ಸದನದಲ್ಲಿ ಮುಡಾ, ವಾಲ್ಮೀಕಿ ಹಗರಣ ಹಸ್ತ್ರ ಪ್ರಯೋಗಕ್ಕೆ ಜೆಡಿಎಸ್-ಬಿಜೆಪಿ ಸಜ್ಜು

ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಗರಣ ಹಾಗೂ ವಾಲ್ಮೀಕಿ ಹಗರಣಗಳಿಂದಾಗಿ ನಮ್ಮ ಕರ್ನಾಟಕ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗುತ್ತಿರುವುದಂತು ಸುಳ್ಳಲ್ಲ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಮೈತ್ರಿ ಪಕ್ಷಗಳು ಅಂದರೆ ಜೆಡಿಎಸ್‌ ಬಿಜೆಪಿ ರಾಜ್ಯ ಸರ್ಕಾರವನ್ನು ಕಟ್ಟಿಹಾಕೋದಿಕ್ಕೆ ಸಜ್ಜಾಗುತ್ತಿವೆ.

ಅದರಲ್ಲೂ ಸೋಮವಾರದಿಂದ ಆರಂಭವಾಗಲಿರುವ ವಿಧಾನಮಂಡಲ ಮುಂಗಾರು ಅಧಿವೇಶನದಲ್ಲಿಯೂ ಪ್ರಸ್ತಾಪ ಮಾಡಲು ಭರ್ಜರಿ ಯೋಜನೆ ರೂಪಿಸಿದೆ. ಜೊತೆಗೆ ನಿನ್ನೆ ಸಮನ್ವಯ ಸಭೆ ಮಾಡಿ ವಿಧಾನಸಭೆ ಮತ್ತು ವಿಧಾನಪರಿಷತ್‌ ನಲ್ಲಿ ಜಂಟಿ ಹೋರಾಟದ ಬಗ್ಗೆ ನಾಯಕರು ಚರ್ಚೆ ಮಾಡಿದ್ದಾರೆ.

ಮುಖ್ಯವಾಗಿ ಅಧಿವೇಶನದಲ್ಲಿ ಮುಡಾ ಸೈಟ್‌ ಪ್ರಕರಣ ಮತ್ತು ವಾಲ್ಮೀಕಿ ನಿಗಮದ ಹಗರಣ ತಾರ್ಕಿಕ ಅಂತ್ಯದವರೆಗೂ ಮುಂದುವರೆಸಲು ನಿರ್ಧಾರ ಮಾಡಲಾಗಿದೆ. ಇದರ ಜೊತೆಗೆ ಬೆಲೆ ಏರಿಕೆ, ಡೆಂಗ್ಯೂ, ಕಾನೂನು ಸುವ್ಯವಸ್ಥೆ ಮತ್ತೀತರ ವಿಷಯ ಆಯಾ ಸನ್ನಿವೇಶಕ್ಕೆ ತಕ್ಕಂತೆ ಪ್ರಸ್ತಾಪ ಮಾಡಲಿದೆ.

ಮುಖ್ಯವಾಗಿ ಸದನದ ಆರಂಭದಲ್ಲೆ ಪ್ರತಿಭಟನೆ ಮಾಡದೆ ವಿಪಕ್ಷವಾಗಿ ಪ್ರಸ್ತಾಪ ಮಾಡಬೇಕಿರುವ ಎಲ್ಲಾ ವಿಷಯಗಳನ್ನ ಪ್ರಸ್ತಾಪ ಮಾಡಿದ ಬಳಿಕ ಕೊನೆಯಲ್ಲಿ ಪ್ರತಿಭಟನೆ ಮಾಡಬೇಕು, ಮುಡಾ ಹಗರಣಕ್ಕೆ ಹೆಚ್ಚಿನ ಹೊತ್ತು ನೀಡಬೇಕು ಎಂದು ಸಭೆಯಲ್ಲಿ ನಿರ್ಧಾರ ಮಾಡಿದ್ದಾರೆ.

Tags:
error: Content is protected !!