ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಆಂತರಿಕ ಒಳ ಜಗಳಗಳು ಆಗುತ್ತಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಸಿದ್ದರಾಮಯ್ಯ ರಾಜಕೀಯದಲ್ಲಿ ಇರುವವರೆಗೆ ನೀವು ಸಿಎಂ ಆಗಲು ಸಾಧ್ಯವೇ? ಎಂದು ಪ್ರಶ್ನಿಸಿ ಬಿಜೆಪಿ ವ್ಯಂಗ್ಯ ಮಾಡಿದೆ.
ಈ ಕುರಿತು ಸಾಮಾಜಿಕ ಮಾಧ್ಯಮ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಬಿಜೆಪಿಯೂ, ಕಾಂಗ್ರೆಸ್ ಒಳಜಗಳ ಈಗ ಮಗ್ಗುಲು ಬದಲಾಯಿಸಿದೆ. ಸಿದ್ದರಾಮಯ್ಯ ನಾಮಜಪ ಮಾಡುತ್ತಿದ್ದ ಸಿಎಂ ಸಿದ್ದರಾಮಯ್ಯ ಬಣದವರಿಗೆ ಡಿಕೆಶಿ ಗುನ್ನಾ ಇಟ್ಟಿದ್ದಾರೆ ಎಂದು ಲೇವಡಿ ಮಾಡಿದೆ.
ಸಿದ್ದರಾಮಯ್ಯ ಹೆಸರು ಹೇಳಿ ತಮ್ಮ ರಾಜಕೀಯವನ್ನು ಗಟ್ಟಿಮಾಡಿಕೊಳ್ಳುತ್ತಿದ್ದ ಮತ್ತು ಸಿದ್ದರಾಮಯ್ಯ ಅವರ ಕುರ್ಚಿಯನ್ನು ಗಟ್ಟಿಮಾಡಲು ಯತ್ನಿಸುತ್ತಿದ್ದವರಿಗೆ ಸಿದ್ದರಾಮಯ್ಯ ಹೆಸರು ದುರ್ಬಳಕೆ ಮಾಡಬೇಡಿ ಎನ್ನುವ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದ್ದಾರೆ ಎಂದು ಟೀಕಿಸಿದೆ.
ಡಿಸಿಎಂ ಡಿಕೆಶಿ ಅವರಿಗೆ ಇದು ರಾಜಕೀಯದಲ್ಲಿ ನಿರ್ಣಾಯಕ ಯುದ್ದವಾಗಿದೆ. ಮಾಡು ಇಲ್ಲವೇ ಮಡಿ ಯುದ್ಧದಲ್ಲಿ ಗೆದ್ದರಷ್ಟೇ ಸಿಎಂ ಹುದ್ದೆ, ಇಲ್ಲದಿದ್ದರೆ ರಾಜಕೀಯ ಸನ್ಯಾಸತ್ವ ಸ್ವೀಕರಿಸುವ ಸಂದರ್ಭ ಬರಲಿದೆ ಎಂದು ಹೇಳಿದೆ.





