Mysore
19
mist

Social Media

ಶನಿವಾರ, 20 ಡಿಸೆಂಬರ್ 2025
Light
Dark

ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರ ಇಡೀ ದೇಶದಲ್ಲಿ ಭ್ರಷ್ಟಾಚಾದಲ್ಲಿ ಪ್ರಥಮ ಸ್ಥಾನ ಪಡೆದು ತಮ್ಮ ಸರ್ಕಾರದ ಲಂಚವತಾರ ಬಟಾ ಬಯಲು ಮಾಡಿಕೊಂಡಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಬಿಜೆಪಿಯೂ, ಕಕಕ ಸರ್ಕಾರ ಅಂದರೆ ಕಮಿಷನ್‌, ಕಲೆಕ್ಷನ್‌, ಕರೆಪ್ಶನ್‌ ಕಾಂಗ್ರೆಸ್‌ ಸರ್ಕಾರ ಲಂಚವತಾರ ಬಟಾ ಬಯಲು ಮಾಡಿಕೊಂಡಿದೆ ಎಂದು ಕಿಡಿಕಾರಿದೆ.

ಲೈಸೆನ್ಸ್‌, ಲೈಸೆನ್ಸ್‌ ವರ್ಗಾವಣೆ, ಲೆಸೆನ್ಸ್‌ ನವೀಕರಣಕ್ಕೆ ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ಅಥವಾ ಇವರ ಪುತ್ರನಿಗೆ ಲಂಚ ನೀಡಲೇ ಬೇಕಿದೆ. ಸಿಎಂ ಸಿದ್ದರಾಮಯ್ಯ ಅವರೇ, ಈ “ಕಕಕ”‌ ದಲ್ಲಿ ನಿಮಗೆಷ್ಟು ಪಾಲು? ಎಂದು ಪ್ರಶ್ನಿಸಿದೆ.

ಭಾರತದಲ್ಲಿಯೇ ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ನಂಬರ್‌ 1 ಭ್ರಷ್ಟ ಸರ್ಕಾರ ಎಂಬ ಕುಖ್ಯಾತಿ ಪಡೆದಿದೆ. ಈ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು, ಭ್ರಷ್ಟ ಹಾಗೂ ಭಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಂಬರ್‌ 1 ಭ್ರಷ್ಟ ಸರ್ಕಾರ ಎಂಬ ಪಾರಿತೋಷಕ ನೀಡಿ ಅಭಿನಂದಿಸಿದರು ಎಂದು ವ್ಯಂಗ್ಯ ಮಾಡಿದೆ.

Tags:
error: Content is protected !!