Mysore
28
broken clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಕಮಲ್‌ ಹಾಸನ್‌ಗೆ ಹೈಕೋರ್ಟ್‌ ಬಿಗ್‌ ಶಾಕ್‌

kamal hasan

ಬೆಂಗಳೂರು: ಕನ್ನಡಿಗರ ಕ್ಷಮೆ ಕೇಳದೇ ಮೊಂಡಾಟ ಮೆರೆದಿದ್ದ ನಟ ಕಮಲ್‌ ಹಾಸನ್‌ಗೆ ಹೈಕೋರ್ಟ್‌ ಬಿಗ್‌ ಶಾಕ್‌ ನೀಡಿದೆ.

ಥಗ್‌ಲೈಫ್‌ ಬಿಡುಗಡೆಗೆ ಭದ್ರತೆ ಕೋರಿ ನಟ ಕಮಲ್‌ ಹಾಸನ್‌ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್‌ ಕಮಲ್‌ ಹಾಸನ್‌ಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಲ್ಲದೇ ಜೂನ್.‌10ರವರೆಗೂ ಥಗ್‌ಲೈಫ್‌ ಸಿನಿಮಾ ಬಿಡುಗಡೆ ಮಾಡದಂತೆ ಆದೇಶ ಹೊರಡಿಸಿದೆ.

ಕನ್ನಡ ಭಾಷೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ನಟ ಕಮಲ್‌ ಹಾಸನ್‌ ಅವರು, ಥಗ್‌ಲೈಫ್‌ ಚಿತ್ರ ಬಿಡುಗಡೆಗೆ ತೊಂದರೆ ಆಗುತ್ತಿದೆ ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಇಂದು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌, ಕಮಲ್‌ ಹಾಸನ್‌ಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತು. ನಿಮ್ಮ ಹೇಳಿಕೆಗಳಿಂದ ನಟ ಶಿವರಾಜ್‌ಕುಮಾರ್‌ ಮುಜುಗರ ಅನುಭವಿಸುವಂತಾಗಿದೆ. ನೆಲ, ಜಲ ವಿಚಾರದಲ್ಲಿ ರಾಜೀ ಮಾತೆ ಇಲ್ಲ. ಕಮಲ್‌ ಹಾಸನ್‌ ಕ್ಷಮೆ ಕೇಳಿದರೆ ಮಾತ್ರ ಅರ್ಜಿ ಪರಿಗಣಿಸಲಾಗುವುದು ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಅವರು ತೀವ್ರ ತರಾಟೆಗೆ ತೆಗೆದುಕೊಂಡರು. ಬಳಿಕ ಮಧ್ಯಾಹ್ನಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿತ್ತು.

ಇಂದು ಮಧ್ಯಾಹ್ನ ಮತ್ತೆ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌, ಕಮಲ್‌ ಹಾಸನ್‌ಗೆ ವಿವೇಚನೆಯ ಪಾಠ ಹೇಳಿದ್ದು, ಒಂದು ವಾರಗಳ ಕಾಲ ಅಂದರೆ ಜೂನ್.‌10ರವರೆಗೂ ರಾಜ್ಯದಲ್ಲಿ ಥಗ್‌ಲೈಫ್‌ ಸಿನಿಮಾ ಬಿಡುಗಡೆಗೆ ಅವಕಾಶವಿಲ್ಲ ಎಂದು ತೀರ್ಪು ನೀಡಿದೆ.

ಜೂನ್.‌10ರ ಮಧ್ಯಾಹ್ನ 3.30ಕ್ಕೆ ಮತ್ತೆ ಅರ್ಜಿ ವಿಚಾರಣೆ ನಡೆಯಲಿದ್ದು, ಸಮಸ್ಯೆ ಬಗೆಹರಿಯುವವರೆಗೂ ಸಿನಿಮಾ ರಿಲೀಸ್‌ ಮಾಡದಂತೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಜೂನ್.‌5ಕ್ಕೆ ರಾಜ್ಯದಲ್ಲಿ ಥಗ್‌ಲೈಫ್‌ ಸಿನಿಮಾ ಬಿಡುಗಡೆಗೆ ಹೈಕೋರ್ಟ್‌ ತಡೆ ನೀಡಿದೆ.

Tags:
error: Content is protected !!