Mysore
29
few clouds

Social Media

ಮಂಗಳವಾರ, 11 ಮಾರ್ಚ್ 2025
Light
Dark

ಈಶ್ವರ್‌ ಖಂಡ್ರೆ ಪುತ್ರ ಮುಸ್ಲಿಂಮರ ವೋಟ್‌ನಿಂದಲೇ ಗೆದ್ದಿದ್ದಾರೆ: ಜಮೀರ್‌ ಅಹಮ್ಮದ್‌ ಖಾನ್

ಬೀದರ್‌: ಈಶ್ವರ್‌ ಖಂಡ್ರೆ ಪುತ್ರ ಮುಸ್ಲಿಂಮರು ಜಾಸ್ತಿ ವೋಟ್‌ ಹಾಕಿದ ಪರಿಣಾಮ ಗೆದ್ದಿದ್ದಾರೆ ಎಂದು ಸಚಿವ ಜಮೀರ್‌ ಅಹಮ್ಮದ್‌ ಹೇಳಿದ್ದಾರೆ.

ಬೀದರ್‌ನಲ್ಲಿ ಹಮ್ಮಿಕೊಂಡಿದ್ದ ಮುಸ್ಲಿಂ ಜನಾಂಗದ ಕಾರ್ಯಕ್ರಮವೊಂದರಲ್ಲಿ ವ್ಯಕ್ತಿಯೋರ್ವ ಜಮೀರ್‌ ಅಹಮ್ಮದ್‌ ಖಾನ್‌ ಬಳಿ ಸಮಸ್ಯೆ ಹೇಳಿಕೊಳ್ಳುತ್ತಾನೆ. ಈ ವೇಳೆ ಆ ವ್ಯಕ್ತಿಯ ಸಮಸ್ಯೆಗೆ ಸ್ಪಂದಿಸಿದ ಜಮೀರ್‌ ಅಹಮ್ಮದ್‌, ನೀವು ಏನೇ ಸಮಸ್ಯೆಗಳಿದ್ದರೂ ಸಂಸದ ಸಾಗರ್‌ ಖಂಡ್ರೆ ಬಳಿ ಹೇಳಿಕೊಳ್ಳಿ. ಅವರು ನಿಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಎಂದರು.

ಇನ್ನೂ ಮುಂದುವರಿದು ಮಾತನಾಡಿದ ಅವರು, ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಸಾಗರ್‌ ಖಂಡ್ರೆ ಗೆಲ್ಲಲು ನೀವೆಲ್ಲಾ ಪ್ರಮುಖ ಕಾರಣಕರ್ತರಾಗಿದ್ದೀರಾ. ಎಲ್ಲಾ ಮುಸ್ಲಿಂ ಮತಗಳು ಕಾಂಗ್ರೆಸ್‌ಗೆ ಬಿದ್ದಿವೆ. ಹೀಗಾಗಿ ಕಾಂಗ್ರೆಸ್‌ ಅಭ್ಯರ್ಥಿ ಸಾಗರ್‌ ಖಂಡ್ರೆ ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದರು.

ನೀವೆಲ್ಲಾ ಕಾಂಗ್ರೆಸ್‌ಗೆ ಮತ ಹಾಕಿದ್ದರಿಂದಲೇ ಸಾಗರ್ ಈ ಗೆಲುವು ಸಾಧಿಸಲು ಸಾಧ್ಯವಾಗಿದೆ. ಆದ್ದರಿಂದ ಮುಸ್ಲಿಂಮರು ಹೇಳಿದ ಕೆಲಸವನ್ನೆಲ್ಲಾ ಸಾಗರ್‌ ಖಂಡ್ರೆ ಮುಲಾಜಿಲ್ಲದೇ ಮಾಡಲೇಬೇಕಾಗುತ್ತದೆ ಎಂದು ಆಗ್ರಹಿಸಿದ್ದಾರೆ.

ಒಟ್ಟಾರೆ ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ಅವರ ಈ ಹೇಳಿಕೆಗಳಿಂದ ಪಕ್ಷದಲ್ಲೇ ಭಿನ್ನಮತ ಶುರುವಾಗಿದ್ದು, ಬೀದರ್‌ನಲ್ಲಿ ಮುಸ್ಲಿಂಮರನ್ನು ಬಿಟ್ಟು ಬೇರೆ ಯಾರೂ ಕೂಡ ಸಾಗರ್‌ ಖಂಡ್ರೆಗೆ ಮತ ಹಾಕಿಲ್ವ ಎಂಬ ಅನುಮಾನ ಶುರುವಾಗಿದೆ.

 

Tags: