ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಮತದಾರರೊಬ್ಬರು ಮತಗಟ್ಟೆಯೊಂದರಲ್ಲಿ ತಮ್ಮ ಮತ ಹಕ್ಕು ಚಲಾಯಿಸಿದ ವೀಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಮೊದಲು ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆಗೆ ಮತಹಾಕುವ ಹಾಗೆ ಮುಂದೆ ಬಂದು ಬಳಿಕ ಬಿಜೆಪಿ ಅಭ್ಯರ್ಥಿ ಭಗವಂತ್ ಖೂಬಾ ಅವರಿಗೆ ಮತದಾನ ಮಾಡಿ ಸನ್ನೆ ಮಾಡಿದ್ದಾನೆ. ವಿವಿ ಪ್ಯಾಟ್‌ನಲ್ಲಿ ಬಂದ ವಿವರವನ್ನೂ ಸಹಾ ವೀಡಿಯೋ ಮಾಡಲಾಗಿದೆ.
ಇನ್ಸ್ಟಾಗ್ರಂ ಸೇರಿದಂತೆ ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ಯ ಈ ವೀಡಿಯೋ ಹರಿದಾಡುತ್ತಿದೆ.





