ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವುಗೊಳಿಸಿದ ವಿಚಾರ ಬೃಹತ್ ವಿವಾದವನ್ನು ಸೃಷ್ಟಿಸಿದ ಬೆನ್ನಲ್ಲೇ ಇದೀಗ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತೆಂಗಿನಗುಂಡಿ ಬೀಚ್‌ನಲ್ಲೂ ಸಹ ಇಂತಹದ್ದೇ ಘಟನೆ ನಡೆದಿದೆ.
ಹೌದು, ತೆಂಗಿನಗುಂಡಿ ಬೀಚ್‌ನಲ್ಲಿ ಭಗವಾ ಧ್ವಜ ಹಾರಿಸಲು ಇದ್ದ ಧ್ವಜ ಕಟ್ಟೆಯನ್ನು ತೆರವುಗೊಳಿಸಲಾಗಿದೆ. ಅಲ್ಲದೇ ವೀರಸಾವರ್ಕರ್ ನಾಮಫಲಕವನ್ನೂ ಸಹ ತೆರವುಗೊಳಿಸಲಾಗಿದೆ. ಇನ್ನು ನಾಮಫಲಕಕ್ಕೆ ಒಪ್ಪಿಗೆ ಇದ್ರೂ ಸಹ ಗ್ರಾಮಪಂಚಾಯತಿಯ ಪಿಡಿಒ ತೆರವುಗೊಳಿಸಿದ್ದಾರೆ ಎಂದು ಗ್ರಾಮಸ್ಥರು ಹಾಗೂ ಬಿಜೆಪಿ ಕಾರ್ಯಕರ್ತರು ಪಿಡಿಒ ವಿರುದ್ಧ ಅಸಾಮಾಧಾನ ಹೊರಹಾಕಿದ್ದಾರೆ. ಅಲ್ಲದೇ ಗ್ರಾಮ ಪಂಚಾಯತಿ ಕಚೇರಿ ಮುಂದೆ ಜಮಾಯಿಸಿ ಧ್ವಜ ಕಟ್ಟೆಯನ್ನು ತೆರವುಗೊಳಿಸಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.