ನವದೆಹಲಿ : ನನ್ನನ್ನು ಕೆಣಕಿದರೆ ಹುಷಾರು ಶಿವಕುಮಾರ್. ನನ್ನ ಬಳಿ ಇರುವ ನಿಮ್ಮ ಮೆಟೀರಿಯಲ್‌ಗಳನ್ನು ತೆಗೆದರೆ ಈ ಭೂಮಿ ಮೇಲೆ ಬದುಕಲು ಸಾಧ್ಯವಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಾರ್ನಿಂಗ್ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮಗೆ ಸಂಬಂಧಪಟ್ಟ ಮೆಟೀರಿಯಲ್‌ಗಳು ನಮ್ಮ ಬಳಿ ಬಂದಿರುವುದು ಒಂದಾ ಎರಡ. ಎಲ್ಲಾ ತೆಗೆಯಲು ಪ್ರಾರಂಭಿಸಿದರೆ ಭೂಮಿ ಮೇಲೆ ಬದುಕಲು ಸಾಧ್ಯವಿಲ್ಲ ಎಂದರು.
ಹೆಚ್.ಡಿ.ರೇವಣ್ಣ ಮಕ್ಕಳನ್ನು ಒಳಗೆ ಹಾಕಿಸಲು ಎಲ್ಲವನ್ನು ಮಾಡಿದ್ದೀರಿ. ನಿಮ್ಮಲ್ಲಿ ಯಾರನ್ನೆಲ್ಲಾ ಒಳಗೆ ಕಳಿಸಬೇಕು ಎಂದು ಭಗವಂತ ಈಗಾಗಲೇ ನಿರ್ಧಾರ ಮಾಡಿದ್ದಾನೆ. ಯಾವ ರಕ್ಷಣೆ ಪಡೆದುಕೊಂಡರು ನಿವು ಉಳಿಯಲು ಸಾಧ್ಯವಿಲ್ಲ. ನಾವು ಎಲ್ಲದಕ್ಕೂ ತಯಾರಾಗಿದ್ದೇವೆ ಎಂದರು.
ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ನಡೆದ ಮಾತುಕತೆಯ ಗೌಪ್ಯತೆ ನಿಮಗೆ ಹೇಗೆ ತಿಳಿಯಲು ಸಾಧ್ಯ ? ಆ ಬಗ್ಗೆ ನಿಮಗೆ ಯಾವನು ಮಾಹಿತಿ ನೀಡಿದ್ದು?
ಮುಂದಿನ ದಿನಗಳಲ್ಲಿ ಏನೇನು ಆಗುತ್ತದೆ ಎಂದು ಕಾದು ನೋಡಿ ಸ್ವಲ್ಪ ಎಂದರು.