Mysore
30
clear sky

Social Media

ಮಂಗಳವಾರ, 11 ಮಾರ್ಚ್ 2025
Light
Dark

೧೦ ವರ್ಷಗಳಲ್ಲಿ ಬೆಸ್ಕಾಂ ಆದಾಯ ೩ ಪಟ್ಟು ಹೆಚ್ಚಳ

ಬೆಂಗಳೂರು : ಕಾಂಗ್ರೆಸ್‌ ಸರ್ಕಾರ ಜಾರಿ ಮಾಡಿದ ಗೃಹ ಜ್ಯೋತಿ ಯೋಜನೆಯಿಂದ ಎಸ್ಕಾಂಗಳು ನಷ್ಟಕ್ಕೆ ಒಳಗಾಗುತ್ತವೆ ಎಂಬ ಮಾತುಗಳು ಕೇಳುಬರುತ್ತಿದ್ದವು. ಆದರೆ ಇದರ ಮಧ್ಯೆ ಬೆಸ್ಕಾಂ ೨೦೨೩ ಮತ್ತು೨೦೨೪ ರ ಹಣಕಾಸು ವರ್ಷದಲ್ಲಿ ೭ ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಲಾಭ ಕಂಡಿರುವುದು ಗೊತ್ತಾಗಿದೆ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಬೆಸ್ಕಾಂ ನಗರಕ್ಕೆ ಮಾತ್ರವಲ್ಲದೆ ದಕ್ಷಿಣದ ಸುಮಾರು ೮ ಜಿಲ್ಲೆಗಳಿಗೂ ಕೂಡ ವಿದ್ಯುತ್‌ ಪೂರೈಕೆ ಮಾಡುತ್ತಿದೆ. ಕಳೆದ ೧೦ ವರ್ಷದ ಆದಾಯ ಅಂಕಿ ಅಂಶ ಬಿಡುಗಡೆಯಾಗಿದ್ದು, ಆದಾಯ ಗಮನಾರ್ಹ ರೀತಿಯಲ್ಲಿ ಹೆಚ್ಚಾಗಿರುವುದು ಕಂಡುಬಂದಿದೆ.

೨೦೧೩-೧೪ ಹಣಕಾಸು ವರ್ಷದಲ್ಲಿ ೧೧ ಸಾವಿರ ಕೋಟಿ ರೂಪಾಯಿಗಳ ಆದಾಯ ಸಂಗ್ರಹ ಮಾಡಿದ್ದ ಬೆಸ್ಕಾಂ ಬಳಿಕ ಪ್ರತಿ ವರ್ಷವೂ ಕೂಡ ಲಾಭದ ಹಳಿಯಲ್ಲಿಯೇ ಇದೆ. ತದನಂತರ ಪ್ರಮುಖವಾಗಿ ಕಳೆದ ೫ ವರ್ಷಗಳನ್ನ ಗಮನಿಸಿದರೆ ೨೦೨೦ -೨೧ ರಲ್ಲಿ ೧೯,೨೩೩ ಕೋಟಿ, ೨೦೨೧-೨೨ ರಲ್ಲಿ ೨೦,೭೧೨ ಕೋಟಿ, ಹಾಗೂ ೨೨-೨೩ ರಲ್ಲಿ ೨೪,೭೦೦ ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ. ಕಳೆದ ಹಣಕಾಸು ವರ್ಷ ಅಂದರೆ ೨೦೨೩-೨೪ ರಲ್ಲಿ  ಬರೋಬ್ಬರಿ ೩೧,೩೭೮ ಕೋಟಿ ರೂಪಾಯಿಗಳ ಭರ್ಜರಿ ಆದಾಯ ಕಂಡಿದ್ದು, ಸಂತಸವನ್ನು ಬೆಸ್ಕಾಂ ವ್ಯಕ್ತಪಡಿಸಿದೆ.

Tags: