Mysore
18
clear sky

Social Media

ಭಾನುವಾರ, 29 ಡಿಸೆಂಬರ್ 2024
Light
Dark

ಬೆಂಗಳೂರು: ಸೀರಿಯಲ್‌ ನಟಿಯ ಮದುವೆ ಟಾರ್ಚರ್‌ಗೆ ಪ್ರಾಣ ಬಿಟ್ಟ ಯುವಕ…

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿಗೆ ಬಂದಿದ್ದ ಯುವತಿ ಒಂಟಿಯಾಗಿ ಬದುಕು ಕಟ್ಟಿಕೊಂಡಿದ್ದಳು. ಆದರೆ, ಆಕೆಯ ಮನೆಯಲ್ಲಿ ಪತ್ತೆಯಾದ ಯುವಕನ ಮೃತದೇಹ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಆಕೆಯ ಮದುವೆ ಕಾಟಕ್ಕೆ ಯುವಕ ಪ್ರಾಣಬಿಟ್ಟಿದ್ದಾನೆಂದು ಮೃತನ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಸದ್ಯ, ಮೃತನ ತಾಯಿಯ ದೂರಿನ ಮೇರೆಗೆ ಹುಳಿಮಾವು ಪೊಲೀಸ್‌ ಠಾಣೆಯಲ್ಲಿ ಯುವತಿಯ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ತನಿಖೆ ನಡೆಸತ್ತಿದ್ದಾರೆ.

ಬೆಂಗಳೂರಿನ ಪಿಳ್ಳಹಾನಹಳ್ಳಿ ನಿವಾಸಿ(25)ಮದನ್‌ ಪ್ರಾಣಬಿಟ್ಟ ಯುವಕ. ಇನ್ನೂ ಸೀರಿಯಲ್‌ ನಟಿ ವೀಣಾ ಕಾಟಕ್ಕೆ ಯುವಕ ಸಾವನ್ನಪ್ಪಿರುವುದು. ಈಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಜನನಿ ಎಂಬ ಧಾರವಾಹಿ ಸೇರಿದಂತೆ ಅನೇಕ ಸೀರಿಯಲ್‌ನಲ್ಲಿ ನಟಿಸಿದ್ದಳು.

ನಗರದ ಸಿ.ಕೆ ಪಾಳ್ಯ ರಸ್ತೆಯಲ್ಲಿರುವ ಲೇಔಟ್‌ನ ಮನೆಯಲ್ಲಿ ವೀಣಾ ಒಂಟಿಯಾಗಿ ಬದುಕು ಕಟ್ಟಿಕೊಂಡಿದ್ದಳು. ಹೀಗಿದ್ದವಳಿಗೆ ವರ್ಷದ ಹಿಂದೆ ಮದನ್‌ ಪರಿಚಯವಾಗಿದೆ. ಆ ಪರಿಚಯ, ಸ್ನೇಹ ನಂತರ ಪ್ರೀತಿಯಾಗಿ ತಿರುಗಿದೆ. ಈ ಪ್ರೀತಿಯೆ ಮದನ್‌ನನ್ನ ಬಲಿ ಪಡೆದಿದೆ.

ಮದನ್‌ನ ಮನಸ್ಸಾರೆ ಇಷ್ಟ ಪಟ್ಟಿದ್ದ ವೀಣಾನಿಗೆ ಬೇರೆ ಹುಡುಗರ ಪರಿಚಯವೂ ಇದ್ದು, ಮದನ್‌ ಸ್ನೇಹಿತನನ್ನೂ ಆಕೆ ಇಷ್ಟ ಪಟ್ಟಿದ್ದಳಂತೆ. ಹೀಗಾಗಿ, ವೀಣಾ ಮೇಲೆ ಅನುಮಾನ ಪಟ್ಟಿದ್ದ ಮದನ್‌ ಮದುವೆಗೆ ಒಲ್ಲೆ ಅಂದಿದ್ದ. ಬಳಿಕ ಕೋಪಗೊಂಡಿದ್ದ ವೀಣಾ ಒಮ್ಮೆ ಮದನ್‌ ಮನೆ ಮುಂದೆ ಬೀದಿ ರಂಪಾಟ ಮಾಡಿದ್ದಳಂತೆ. ಹೀಗೆ ಈ ರಂಪಾಟ ಮುಂದುವರೆದಿದ್ದರು ಇವರ ಪ್ರೇಮಕ್ಕೇನು ಫುಲ್‌ಸ್ಟಾನ್‌ ಬಿದ್ದಿರ್ಲಿಲ್ಲ. ಆದ್ರೆ, ಈ ಮಧ್ಯೆ, ನಿನ್ನೆ ರಾತ್ರಿ ಹೊತ್ತಲ್ಲಿ ಮದನ್‌ಗೆ ಪಾರ್ಟಿ ಮಾಡೋಣ ಅಂತಾ ಕರೆದ ವೀಣಾ, ಮದುವೆ ಆಗುವಂತೆ ಒತ್ತಾಯ ಮಾಡಿದ್ದಳು.

ಪ್ರೀತಿ ಕೊಂದ ಕೊಲೆಗಾತಿ..!
ಇಬ್ಬರು ಪಾರ್ಟಿಯಲ್ಲಿ ಕಂಠ ಪೂರ್ತಿ ಕುಡಿದ್ದಿದ್ದಾರೆ. ಡ್ರಿಂಕ್ಸ್‌ ಮಾಡುತ್ತಲೇ ಇಬ್ಬರ ಮಾತಿನ ವರಸೆ ಬದಲಾಗಿದ್ದು, ವೀಣಾ ಮದುವೆ ಮ್ಯಾಟ್ರೂ ತೆಗೆದು, ಮದುವೆ ಆಗುವಂತೆ ಒತ್ತಾಯಿಸಿದ್ದಾಳೆ. ಆದರೆ, ವೀಣಾ ಬಗ್ಗೆ ಅನುಮಾನ ಇಟ್ಟುಕೊಂಡಿದ್ದ ಮದನ್‌ಗೆ ಸುತರಾಮ್‌ ಇಷ್ಟವಿರಲಿಲ್ಲ. ಹೀಗಾಗಿ, ಮಾತಿನ ಚಟಾಪಟಿ ಜಗಳಕ್ಕೆ ತಿರುಗಿದೆ. ಈ ಜಗಳ ಮಧ್ಯೆಯೆ ಮದನ್‌ ವಾಶ್‌ ರೊಂಗೆ ಹೋಗಿದ್ದಾನೆ. ತುಂಬಾ ಹೊತ್ತಾದ್ರು ಆತ ಬಂದಿಲ್ಲ…. ಹೀಗಾಗಿ, ಏನಾಯ್ತು, ಅಂತಾ ನೋಡಲು ಹೋದ ವೀಣಾಗೆ ಅಕ್ಷರಶಃ ಶಾಕ್‌ ಆಗಿದೆ. ಯಾಕಂದ್ರೆ, ಆತನ ದೇಹ ಫ್ಯಾನ್‌ನಲ್ಲಿ ನೇತಾಡ್ತಿತ್ತು.

ಇನ್ನೂ. ಇತ್ತ ಮದನ್‌ ತಾಯಿ ವೀಣಾ ವಿರುದ್ದ ಆರೋಪ ಮಾಡಿದ್ದು, ನನ್ನ ಮಗನಿಗೆ ಈಕೆ ಮಾನಸಿಕ ಕಿರುಕುಳ ನೀಡಿದ್ದಾರೆ ಅತ್ಮಹತ್ಯೆ ಪ್ರಚೋದನೆ ನೀಡಿರೋದಾಗಿ ದೂರು ನೀಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಹುಳಿಮಾವು ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬರಸ್ಥರಿಗೆ ಹಸ್ತಾಂತರಿದ್ದಾರೆ. ಸದ್ಯ, ಮದನ್‌ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ತನಿಖೆ ಬಳಿಕ ಮದನ್‌ ಸಾವಿನ ಅಸಲಿ ಕಾರಣ ಗೊತ್ತಾಗಲಿದೆ.

 

 

Tags: