ಬೆಂಗಳೂರು: ಕ್ರಿಕೆಟೆ ಆಟ ಮುಗಿಸಿ ಸ್ನೇಹಿತರೊಂದಿಗೆ ಈಜಲು ಹೋಗಿದ್ದ 15 ವರ್ಷದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯೊಬ್ಬ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಭಾನುವಾರ(ಜೂ.17) ಜರುಗಿದೆ.
ಬೆಂಗಳೂರಿನ ಅತ್ತಿಬೆಲೆ ನಿವಾಸಿ ಧನುಷ್ ಮೃತಪಟ್ಟ ವಿದ್ಯಾರ್ಥಿ. ಈತ ಭಾನುವಾರ ಮಧ್ಯಾಹ್ನ ಕ್ರಿಕೆಟ್ ಆಡುವುದಾಗಿ ಹೊರ ಹೋಗಿದ್ದ. ನಂತರ ಕೆರೆಯಲ್ಲಿ ಈಜಾಡಲು ಹೋಗಿದ್ದ, ನೀರು ತುಂಬಿದ್ದ ಕೆರೆಯಲ್ಲಿ ಈಜು ಬಾರದೇ ಮುಳುಗಿ ಸಾವನ್ನಪ್ಪಿದ್ದಾನೆಂದು ತಿಳಿದು ಬಂದಿದೆ.
ಭಾನುವಾರ ಸಂಜೆ ಅತ್ತಿಬೆಲೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸೇರಿ ಹುಡುಕಾಟ ನಡೆಸಿದ್ದರು. ಆದರೆ, ಸಂಜೆ ಕತ್ತಲಾಗುತ್ತಿದ್ದಂತೆ ಹುಡುಕಾಟ ನಿಲ್ಲಿಸಲಾಗಿತ್ತು. ಇಂದು(ಜೂ.17) ಬೆಳಿಗ್ಗೆ ಮತ್ತೆ ಹುಟುಕಾಟ ನಡೆಸಿ ಮೃತದೇಹ ಪತ್ತೆಮಾಡಲಾಗಿದೆ.





