Mysore
20
overcast clouds

Social Media

ಬುಧವಾರ, 28 ಜನವರಿ 2026
Light
Dark

ಬೆಂಗಳೂರು ಅರಮನೆ ಮೈದಾನ ; ಟಿಡಿಆರ್‌ ಪಾವತಿಗೆ ಸುಪ್ರೀಂ ತೀರ್ಪು

Supreme Court

ಹೊಸದಿಲ್ಲಿ : ರಾಜ್ಯ ಸರ್ಕಾರ ರಸ್ತೆ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಂಡಿರುವ ಬೆಂಗಳೂರಿನ ಅರಮನೆ ಮೈದಾನದ 15 ಎಕರೆಗೂ ಹೆಚ್ಚು ಭೂಮಿಗೆ ರೂ.3400 ಕೋಟಿಯ ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕು(ಟಿಡಿಆರ್)ಅನ್ನು ಕೂಡಲೇ ಮೈಸೂರು ರಾಜವಂಶಸ್ಥರಿಗೆ ನೀಡಬೇಕು ಎಂದು ಗುರುವಾರ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ.

ಇದನ್ನೂ ಓದಿ:- ಹೆಚ್ಚು ಬಜೆಟ್‌ ಮಂಡಿಸಿದ ಜೊತೆಗೆ ಹೆಚ್ಚು ಸಾಲು ಮಾಡಿದ ಕೀರ್ತಿಯೂ ಸಿದ್ದರಾಮಯ್ಯಗೆ ಸಲ್ಲಬೇಕು : ಸಿ.ಟಿ ರವಿ ವಾಗ್ದಾಳಿ

ನ್ಯಾಯಮೂರ್ತಿಗಳಾದ ಎಂ.ಎಂ ಸುಂದರೇಶ್‌ ಮತ್ತು ಅರವಿಂದ್‌ ಕುಮಾರ್‌ ಅವರಿದ್ದ ಪೀಠವು ಈ ಹಿಂದೆ ಒಂದು ವಾರದೊಳಗೆ ರಾಜ್ಯ ಸರ್ಕಾರ ಠೇವಣಿ ಇಡಬೇಕು ಎಂದು ಸೂಚಿಸಿತ್ತು. ಅದರಂತೆ ರೂ.3400 ಕೋಟಿಯ ಟಿಡಿಆರ್‌ ಅನ್ನು ಠೇವಣಿ ಇಡಲಾಗಿತ್ತು. ಈ ಟಿಡಿಆರ್‌ಗಳನ್ನು ರಾಜವಂಶಸ್ಥರಿಗೆ ಹಸ್ತಾಂತರ ಮಾಡಬಾರದು ರಾಜ್ಯ ಸರ್ಕಾರವು ಮಧ್ಯಂತರ ಅರ್ಜಿಯಲ್ಲಿ ಮನವಿ ಮಾಡಿತ್ತು.

Tags:
error: Content is protected !!