Mysore
21
scattered clouds

Social Media

ಗುರುವಾರ, 12 ಮಾರ್ಚ್ 2026
Light
Dark

ಬೆಳ್ತಂಗಡಿ: ಕಾಡುದಾರಿಯಲ್ಲಿ ಹೆಣ್ಣು ಶಿಶು ಪತ್ತೆ

ಬೆಳ್ತಂಗಡಿ: ಇಲ್ಲಿನ ಬೆಳಾಲು ಗ್ರಾಮದ ಕೊಡೋಳುಕೆರೆ ಎಂಬಲ್ಲಿನ ಕಾಡುದಾರಿಯಲ್ಲಿ ಪಾಪಿಗಳು ಹಸುಗೂಸನ್ನು ಬಿಟ್ಟು ಹೋಗಿರುವ ಘಟನೆ ನಡೆದಿದೆ.

ಕೊಡೋಳುಕೆರೆ ಎಂಬಲ್ಲಿನ ಮುಂಡ್ರೋಟ್ಟು ರಸ್ತೆ ಬಳಿ ನಾಲ್ಕು ತಿಂಗಳ ಹೆಣ್ಣು ಶಿಶು ಪತ್ತೆಯಾಗಿದೆ. ದಾರಿಹೋಕರಿಗೆ ಮಗು ಇರುವ ಬಗ್ಗೆ ತಿಳಿದಿದೆ. ತಕ್ಷಣ ಸ್ಥಳೀಯರು ಸೇರಿ ಮಗುವನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಧರ್ಮಸ್ಥಳ ಠಾಣೆಯ ಪೊಲೀಸರು ಶಿಶುವನ್ನು ಆರೋಗ್ಯ ಇಲಾಖೆ ಅಧಿಕಾರಿಗಳ ವಶಕ್ಕೆ ಒಪ್ಪಿಸಿದ್ದಾರೆ‌. ಇದೀಗ ಪೊಲೀಸರು ಮಗುವಿನ ಪೊಷಕರ ಪತ್ತೆಗೆ ಶೋಧನೆ ನಡೆಸುತ್ತಿದ್ದಾರೆ.

Tags:
error: Content is protected !!