ಬೆಂಗಳೂರು: ಬಳ್ಳಾರಿ ಗಲಾಟೆ ಪ್ರಕರಣದಲ್ಲಿ ಕೊಲೆಯಾದ ಕಾಂಗ್ರೆಸ್ ಕಾರ್ಯಕರ್ತನ ಶವ ಪರೀಕ್ಷೆಯನ್ನು ಸರ್ಕಾರ ಎರಡು ಬಾರಿ ಮಾಡಿದ್ದು ಯಾಕೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಈ ಕುರಿತು ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಳ್ಳಾರಿ ಗಲಾಟೆ ಪೂರ್ವ ನಿಯೋಜಿತವಾಗಿದ್ದು, ಮೃತನ ಶವ ಪರೀಕ್ಷೆಯನ್ನು ಎರಡು ಬಾರಿ ಮಾಡಲಾಗಿದೆ. ಎರಡನೇ ಬಾರಿ ಯಾರ ಒತ್ತಡಕ್ಕೆ ಶವ ಪರೀಕ್ಷೆ ಮಾಡಿದ್ದಾರೆ? ಶವ ಪರೀಕ್ಷೆ ಮಾಡಲು ಅನುಮತಿ ಕೊಟ್ಟವರು ಯಾರು? ಯಾರ ಒತ್ತಡಕೆ ಮಣಿದು ಶವ ಪರೀಕ್ಷೆ ಮಾಡಿದ್ದಾರೆ? ಈ ಪ್ರಕರಣದ ತನಿಖೆಯ ಬಗ್ಗೆ ಅನುಮಾನವಿದ್ದು, ಸಿಬಿಐಗೆ ನೀಡಬೇಕು ಎಂದು ಆಗ್ರಹಿಸಿದರು.
ಜನಾರ್ಧನ ರೆಡ್ಡಿ ಮೇಲೆ ಆರೋಪ ಹೊರಿಸಲೆಂದೇ ಎರಡನೇ ಬಾರಿ ಶವ ಪರೀಕ್ಷೆ ಮಾಡಲಾಗಿದೆ. ಗುಂಡಿನ ದಾಳಿ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ್ಯದಲ್ಲಿ ಸರ್ಕಾರ ಬದುಕಿದೆಯಾ? ಇಲ್ಲಾ ಸತ್ತು ಹೋಗಿದೆಯಾ? ಎಂದು ಕಿಡಿಕಾರಿದರು.





