Mysore
17
few clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಬೆಳಗಾವಿ | ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಬಾಲಕಿಯರ ಮೇಲೆ ಗ್ಯಾಂಗ್‌ ರೇಪ್‌ ; ಇಬ್ಬರ ಬಂಧನ

ಬೆಳಗಾವಿ : ಜಿಲ್ಲೆಯ ರಾಯಬಾಗ ತಾಲ್ಲೂಕಿನ ಸವದತ್ತಿ ಗ್ರಾಮದ ಬಳಿಯ ಗುಡ್ಡಾಗಾಡು ಪ್ರದೇಶದಲ್ಲಿ 17 ವರ್ಷದ ಇಬ್ಬರು ಯುವತಿಯರ ಮೇಲೆ ಮೂವರು ಯುವಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅತ್ಯಾಚಾರದ ವಿಡಿಯೊ ಚಿತ್ರೀಕರಿಸಿಕೊಂಡು ಬೆದರಿಸುತ್ತಿದ್ದ ಆರೋಪಿಗಳ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಸಂಬಂಧ ಮಾಹಿತಿ ನೀಡಿದ ಜಿಲ್ಲಾ ಎಸ್‌ಪಿ ಡಾ.ಭೀಮಾಶಂಕರ್‌ ಗುಳೇದ್‌, ಆರೋಪಿ ಅಭಿಷೇಕ್‌ ಇನ್‌ಸ್ಟಾಗ್ರಾಂ ಮೂಲಕ ಓರ್ವ ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದಾನೆ. ಪರಿಚಯ ಸಲುಗೆಯಾಗಿ ಬೆಳೆದಿದೆ. ಬಳಿಕ ಪುಸಲಾಯಿಸಿ ಸವದತ್ತಿಯ ಎಲ್ಲಮ್ಮನ ಗುಡ್ಡಕ್ಕೆ ಕರೆದೊಯ್ದಿದ್ದಾನೆ. ಈ ವೇಳೆ ಬಾಲಕಿ ತನ್ನ ಸ್ನೇಹಿತೆಯನ್ನು ಕರೆದುಕೊಂಡು ಹೋಗಿದ್ದಾಳೆ. ಇಬ್ಬರೂ ಒಟ್ಟಾಗಿ ಕಾರಿನಲ್ಲಿ ಹೋಗಿದ್ದಾರೆ. ಕಾರಿನಲ್ಲಿ ಮೂವರು ಆರೋಪಿಗಳಿದ್ದರು. ಎಲ್ಲರೂ ಒಟ್ಟಾಗಿ ಸೇರಿ ಇಬ್ಬರು ಬಾಲಕಿಯರ ಮೇಲೂ ಅತ್ಯಾಚಾರ ಮಾಡಿದ್ದಾರೆ. ಜೊತೆಗೆ ಅತ್ಯಾಚಾರದ ವಿಡಿಯೋ ಚಿತ್ರಿಸಿಕೊಂಡು ಬೆದರಿಕೆ ಹೊಡ್ಡಿದ್ದಾರೆ ಎಂದು ಹೇಳಿದರು.

ಆರೋಪಿಗಳಾದ ಅಭೀಷೆಕ್‌ , ಆದಿಲ್‌ ಶಾ ಮತ್ತು ಕೌತುಕ್‌ ಅತ್ಯಾಚಾರದ ಪ್ರತಿ ಕ್ಷಣಗಳನ್ನು ವಿಡಿಯೋ ಚಿತ್ರೀಕರಿಸಿಕೊಂಡಿದ್ದರು. ಇದನ್ನೇ ಇಟ್ಟುಕೊಂಡು ಪದೇಪದೇ ಬರುವಂತೆ ಒತ್ತಾಯ ಮಾಡುತ್ತಿದ್ದರು. ಅಲ್ಲದೇ ಮುಂದಿನ ವಾರ ಎಲ್ಲರೂ ಸೇರಿ ಗೋವಾಗೆ ಹೋಗೋಣ, ಬರದೆ ಇದ್ದರೆ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತೇವೆ ಎಂದು ಬ್ಲ್ಯಾಕ್‌ಮೇಲ್‌ ಮಾಡಿದ್ದರು. ಇದರಿಂದ ಹೆದರಿದ ಒಬ್ಬ ಯುವತಿ ಜ.13ರಂದು ಹಾರೂಗೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರವೇ ಪ್ರಕರಣ ಗೊತ್ತಾಗಿದ್ದು ಎಂದು ಎಸ್‌ಪಿ ತಿಳಿಸಿದರು.

ಪ್ರಕರಣ ದಾಖಲಾದ 24ಗಂಟೆಯೊಳಗೆ ಇಬ್ಬರು ಆರೋಪಿಯನ್ನು ಬಂಧಿಸಿಲಾಗಿದೆ. ಇನ್ನೊರ್ವ ಆರೋಪಿಗೆ ಶೋಧನೆ ನಡೆಯುತ್ತಿದೆ ಎಂದು ಹೇಳಿದರು.

 

Tags:
error: Content is protected !!