ಬೆಳಗಾವಿ: ಗಡಿನಾಡು ಬೆಳಗಾವಿ ಜಿಲ್ಲೆಯ ಜನರ ಬಹುದಿನದ ಬೇಡಿಕೆ ಈಡೇರಿದೆ. ಬೆಳಗಾವಿ ಮತ್ತು ನವಿ ಮುಂಬೈ ನಡುವೆ ನೇರ ವಿಮಾನ ಸೇವೆ ಆರಂಭಿಸುವುದಾಗಿ ಇಂಡಿಗೋ ಘೋಷಣೆ ಮಾಡಿದೆ.
ಈ ಕುರಿತು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಮಾಹಿತಿ ನೀಡಿದ್ದಾರೆ. ಬೆಳಗಾವಿ ಜನತೆಯ ಬಹು ದಿನಗಳ ಬೇಡಿಕೆಯಂತೆ ಇದೀಗ 29ನೇ ಮಾರ್ಚ್.2026ರಿಂದ ಬೆಳಗಾವಿ-ನವಿ ಮುಂಬೈ ನಡುವೆ ಇಂಡಿಗೋ ವಿಮಾನ ಹಾರಾಟವು ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.
ವೇಳಾಪಟ್ಟಿ: ಈ ವಿಮಾನವು ನವಿ ಮುಂಬೈಯಿಂದ ಬೆಳಿಗ್ಗೆ 10.20ಕ್ಕೆ ಹೊರಟು ಬೆಳಗಾವಿಯನ್ನು 11.35ಕ್ಕೆ ತಲುಪಲಿದೆ. ತದನಂತರ ಬೆಳಗಾವಿಯಿಂದ ಸಂಜೆ 17.35ಕ್ಕೆ ಹೊರಟು ನವಿ ಮುಂಬೈಯನ್ನು 18.45ಕ್ಕೆ ತಲುಪುತ್ತದೆ.
ವಿಮಾನಯಾನ ಸೇವೆ ಪ್ರಾರಂಭಕ್ಕೆ ಸಹಕರಿಸಿದ ಕೇಂದ್ರ ವಿಮಾನಯಾನ ಸಚಿವರು ಶ್ರೀ ಕೆ.ರಾಮಮೋಹನ್ ನಾಯ್ಡು ಇವರಿಗೆ ಮತ್ತು ಇಂಡಿಗೋ ಸಂಸ್ಥೆಯ ಅಧಿಕಾರಿಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳು ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.





