Mysore
18
overcast clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ರಾಜಭವನ, ವಿಧಾನಸೌಧಕ್ಕೆ ನೋಟಿಸ್‌ ಜಾರಿ: ಬಿಬಿಎಂಪಿ

ಬೆಂಗಳೂರು: ಆಸ್ತಿ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ರಾಜಭವನ, ವಿಧಾನಸೌಧ ಮತ್ತು ವಿಕಾಸಸೌಧ ಸೇರಿದಂತೆ ಒಟ್ಟು 258 ಸರ್ಕಾರಿ ಕಟ್ಟಡಗಳಿಗೆ ಬೃಹತ್‌ ಬೆಂಗಳೂರು ಮಹಾ ನಗರ ಪಾಲಿಕೆ ನೋಟಿಸ್‌ ಜಾರಿ ಮಾಡಿದೆ.

ಸುಮಾರು 17 ವರ್ಷಗಳಿಂದ ಕೆಲವು ಇಲಾಖೆಗಳು ಸುಸ್ತಿದಾರರಾಗಿದ್ದಾರೆಂದು ವರದಿಯಾಗಿದ್ದು, ಅಂದಾಜು 658 ಕೋಟಿ ರೂ.ಗಳಷ್ಟು ತೆರಿಗೆ ಬಾಕಿ ಹಣವನ್ನು ಪಾವತಿಸದೇ ಹಾಗೆಯೇ ಉಳಿಸಿಕೊಂಡಿದ್ದಾರೆ.

ನಾಗರೀಕ ಸಂಸ್ಥೆ ತನ್ನ ಆದಾಯವನ್ನು ಹೆಚ್ಚು ಮಾಡಿಕೊಳ್ಳಲು ಹೆಣಗಾಡುತ್ತಿರುವಾಗ, ಎಲ್ಲಾ ತೆರಿಗೆ ಸುಸ್ತಿದಾರರ ವಿರುದ್ಧ ಅವರ ಸ್ಥಾನಮಾನವನ್ನು ಲೆಕ್ಕಿಸದೆ ಕಠಿಣ ಕ್ರಮ ವಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಗರೀಕ ಸಂಸ್ಥೆಯು ಒನ್ ಟೈಮ್ ಸೆಟಲ್ಮೆಂಟ್ (ಒಟಿಎಸ್) ಯೋಜನೆಯನ್ನು ಪರಿಚಯಿಸಿತ್ತು. ಈ ಯೋಜನೆಯೂ ಬಾಕಿಗಳ ಮೇಲಿನ ಚಕ್ರಬಡ್ಡಿಯನ್ನು ಮನ್ನಾ ಮಾಡಿತ್ತು. ಅಲ್ಲದೇ ಪಾವತಿಗಳನ್ನು ಉತ್ತೇಜಿಸಲು ದಂಡವನ್ನು ಶೇ.50 ರಷ್ಟು ಕಡಿಮೆ ಮಾಡಿತ್ತು. ಇದು ಸರ್ಕಾರಿ ಕಚೇರಿಗಳಿಗೂ ಮುಕ್ತವಾಗಿತ್ತು. ಆದರೆ ಈ ಯೋಜನೆ ಮುಗಿಯುವ ಮುನ್ನ ಯಾರೂ ಇದರ ಪ್ರಯೋಜನಗಳನ್ನು ಪಡೆಯಲಿಲ್ಲ.

Tags:
error: Content is protected !!