ಹುಬ್ಬಳ್ಳಿ: ಸದ್ಯದ ಪರಿಸ್ಥಿತಿ ನೋಡಿದ್ರೆ ರಾಜೀನಾಮೆ ಕೊಡುವುದು ಸೂಕ್ತ ಎಂದು ಕರ್ನಾಟಕ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಈ ಕುರಿತು ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಕೀಯ ವಲಯದಲ್ಲಿ ನಡೆಯುತ್ತಿರುವ ಘಟನೆಗಳು ಹಾಗೂ ವಿಧಾನಮಂಡಲ ಸದನದಲ್ಲಿ ಉಂಟಾದ ಪರಿಸ್ಥಿತಿಗಳ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಎಲ್ಲವನ್ನೂ ನೋಡಿ ನೋಡಿ ಸಾಕಾಗಿದೆ. ಸದನದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾದ ಹನಿಟ್ರ್ಯಾಪ್ ಪ್ರಕರಣವು ರಾಜಕೀಯವನ್ನು ಕಲುಷಿತಗೊಳಿಸಿದೆ. ತುಂಬಾ ದಿನಗಳಿಂದ ಸದನದ ಗೌರವವು ಹಾಳಾಗಿದೆ. ಇಂತಹ ಘಟನೆಗಳನ್ನು ನೋಡಿದಾಗ ರಾಜೀನಾಮೆ ಕೊಡುವುದೇ ಸೂಕ್ತ ಎನಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.





