Mysore
18
broken clouds

Social Media

ಸೋಮವಾರ, 26 ಜನವರಿ 2026
Light
Dark

ಕಾಂಗ್ರೆಸ್‌ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಯೋಜನೆಗಳಿಗೂ ಹಣವಿಲ್ಲ: ಬಸವರಾಜ ಬೊಮ್ಮಾಯಿ

ಗದಗ: ಕಾಂಗ್ರೆಸ್‌ ಸರ್ಕಾರದಲ್ಲಿ ಕೇವಲ ಗ್ಯಾರಂಟಿ ಯೋಜನೆಗಳಿಗೆ ಅಷ್ಟೇ ಅಲ್ಲ, ಯಾವುದೇ ಅಭಿವೃದ್ಧಿ ಯೋಜನೆಗಳಿಗೂ ಹಣವಿಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ವ್ಯಂಗ್ಯ ಮಾಡಿದ್ದಾರೆ.

ಗದಗದಲ್ಲಿ ಇಂದು(ಫೆಬ್ರವರಿ.21) ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗ್ಯಾರಂಟಿಗಳು ರಾಜಕೀಯ ಲಾಭಕ್ಕಾಗಿ ಮಾಡಿದ ಯೋಜನೆಯಾಗಿದೆ. ಸಾರ್ವಜನಿಕರು ಮತ್ತು ತಾಯಂದಿರ ಕಣ್ಣಲ್ಲಿ ಮಣ್ಣು ಹಾಕುವ ಯೋಜನೆ ಎಂದು ಟೀಕಿಸಿದರು.

ರಾಜ್ಯ ಸರ್ಕಾರ ಮಹಿಳೆಯರಿಗೆ ಗೌರವ ಧನ ನೀಡಲು ವಿಫಲವಾಗಿದೆ. ಈ ಹಣ ಯಾವ ತಿಂಗಳು ಸಹ ಅವರಗೆ ಬಂದಿಲ್ಲ. ಅಲ್ಲದೇ ರಾಜ್ಯ ಸರ್ಕಾರದ ಹಣಕಾಸಿನ ವ್ಯವಸ್ಥೆ ಸಂಪೂರ್ಣ ನೆಲ ಕಚ್ಚಿದ್ದು,
ಗೃಹಲಕ್ಷ್ಮೀ ಹಣವನ್ನು ಅದೇನೂ ತಿಂಗಳ ಸಂಬಳವೇ ಎಂದು ಕಾಂಗ್ರೆಸ್‌ನ ಸಚಿವರೇ ಪ್ರಶ್ನಿಸುತ್ತಾರೆ. ಆದರೆ ಆ ಹಣ ಗೌರವ ಧನವಾಗಿದ್ದು, ಪ್ರತಿ ತಿಂಗಳು ಹಣ ನೀಡಿಲ್ಲ ಎಂದರೆ ಗೌರವ ಧನ ನೀಡಿಲ್ಲ ಎಂದರ್ಥ ಎಂದು ಹೇಳಿದರು.

ಇನ್ನು ರಾಜ್ಯದಲ್ಲಿ ದೈನಂದಿನ ಬಳಕೆಯ ವಸ್ತುಗಳ ಮೇಲೆ ಬೆಲೆ ಏರಿಕೆಯಾಗಿದೆ. ಆದರೆ ರಾಜ್ಯ ಸರ್ಕಾರ ಮಮಾತ್ರ ತೆರಿಗೆ ರೂಪದಲ್ಲ ಹಣ ಪಡೆದು ಅದನ್ನೇ ಗ್ಯಾರಂಟಿ ರೂಪದಲ್ಲಿ ಮರಳಿ ಕೊಡಲು ಮುಂದಾಗಿದೆ. ಹೀಗಿದ್ದರೂ ಸಿಎಂ ಸಿದ್ದರಾಮಯ್ಯ ತಮ್ಮ ಭಂಡತನವನ್ನು ಪ್ರದರ್ಶನ ಮಾಡಿ ರಾಜ್ಯ ಸರ್ಕಾರದ ವಿಫಲತೆ ಒಪ್ಪಿಕೊಳ್ಳುತ್ತಿಲ್ಲ ಎಂದು ವಾಗ್ದಾಳ ನಡೆಸಿದರು.

Tags:
error: Content is protected !!