Mysore
24
clear sky

Social Media

ಬುಧವಾರ, 17 ಡಿಸೆಂಬರ್ 2025
Light
Dark

ಬಸವನಗುಡಿ ಕಡಲೆಕಾಯಿ ಪರಿಷೆ ಆರಂಭ: ಕಳೆಕಟ್ಟಿದ ಬುಲ್‌ಟೆಂಪಲ್‌ ರೋಡ್‌

ಬೆಂಗಳೂರು: ಇಂದಿನಿಂದ 5ದಿನಗಳ ಕಾಲ ವಿಶ್ವ ವಿಖ್ಯಾತ ಬಸವನಗುಡಿ ಕಡಲಡಕಾಯಿ ಪರಿಷೆ ನಡೆಯಲಿದ್ದು, ನಗರದ ದೊಡ್ಡಗಣಪತಿ ರಸ್ತೆಯಲ್ಲಿ ಬೇರೆ ರಾಜ್ಯಗಳನ್ನೂ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಕಡಲೆಕಾಯಿ ಬೆಳೆಗಾರರು ರಾಶಿ ರಾಶಿ ಕಾಡಲೆಕಾಯಿಯೊಂದಿಗೆ ಬೀಡುಬಿಟ್ಟಿದ್ದಾರೆ.

ಸೋಮವಾರ ದೊಡ್ಡಗಣಪತಿ ಕಡಲೆಕಾಯಿಂದ ಅಭಿಷೇಕ ಮಾಡುವ ಮೂಲಕ ರಾಜ್ಯ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಕಡಲೆಕಾಯಿ ಪರಿಷೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.

ಈಗಾಗಲೆ ಸುಮಾರು 200 ಜನ ರೈತರು, 20ಕ್ಕು ಹೆಚ್ಚು ಬಗೆಯ ಕಡಲೆಕಾಯಿಗಳ ಅಂಗಡಿಗಳನ್ನು ಇಟ್ಟಿದ್ದಾರೆ. ಈ ಬಾರಿಯ ಪರಿಷೆಗೆ ಸುಮಾರು 5-6ಲಕ್ಷ ಮಂದಿ ಭಾಗವಹಿಸುಯವ ನಿರೀಕ್ಷೆ ಇದ್ದು ದೇವಸ್ಥಾನದ ಸುತ್ತಾ ಹಾಗೂ ಬುಲ್‌ ಟೆಂಪಲ್‌ ರಸ್ತೆ ಉದ್ದಕ್ಕು ಬಿಗಿ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿದೆ. ಎಲ್ಲೆಡೆ ಸಿಸಿಟಿವಿ ಅಳವಡಿಸಲಾಗಿದೆ.

 ೨ದಿನದ ಮುಂಚೆಯೇ ಜಾತ್ರೆ ಕಳೆ:
ಡಿ. 11 ಸೋಮವಾರದಂದು ಬಸವನಗುಡಿ ಕಡಲೆಕಾಯಿ ಪರಿಷೆಗೆ ಅಧಿಕೃತ ಚಾಲನೆ ದೊರಕಲಿದೆ. ಆದರೆ ಈ ಬಾರಿ ಎರಡು ದಿನದ ಮುಂಚೆಯೇ ದೊಡ್ಡ ಗಣಪತಿ ದೇವಾಲಯ ಇರುವ ಬುಲ್‌ ಟೆಂಪಲ್‌ ರಸ್ತೆಯಲ್ಲಿ ಜಾತ್ರೆಯ ಪ್ರಾರಂಬವಾಗಿದೆ. ರಸ್ತೆಯ ಪಕ್ಕದಲ್ಲಿ ವಿವಿಧೆಡೆಯಿಂದ ಬಂದಿರುವ ಕಡಲೆಕಾಯಿ ವ್ಯಾಪಾರಿಗಳು ಬಿರುಸಿನ ವ್ಯಾಪಾರದಲ್ಲಿ ತೊಡಗಿದ್ದಾರೆ.

ಪ್ಲಾಸ್ಟಿಕ್‌ ಬಳಕೆ ನಿರ್ಬಂಧ:

ಈ ಬಾರಿಯ ಕಡಲೆಕಾಯಿ ಪರಿಷೆಯಲ್ಲಿ ಸಂಪೂರ್ಣ ಪ್ಲಾಸ್ಟಿಕ್‌ ಮುಕ್ತ ಮಾಡಲು ಸರ್ಕಾರ ಹಾಗೂ ರಾಜ್ಯ ಸರ್ಕಾರ ಎಲ್ಲಾ ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ಈ ಬಗ್ಗೆ ಈಗಾಗಲೆ ಎಲ್ಲೆಡೆ ಸೂಚನೆಗಳನ್ನು ನೀಡಲಾಗಿದೆ. ಕಡಲೆಕಾಯಿ ಪರಿಷೆಗೆ ಬನ್ನಿ ಬಟ್ಟೆಯ ಕೈಚೀಲ ತನ್ನಿ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಘೋಷಣೆ ಮಾಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!