ಬೆಂಗಳೂರು : ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ೧೮೭ ಕೋಟಿ ಹಗರಣದ ಪ್ರಕರಣದಲ್ಲಿ ಸಿಲುಕಿರುವ ನಿಗಮದ ಅಧ್ಯಕ್ಷ, ಶಾಸಕ ಬಸನಗೌಡ ದದ್ದಲ್ ಇಂದು ವಿಧಾನಸೌಧದಲ್ಲಿ ಪ್ರತ್ಯಕ್ಷವಾಗಿದ್ದಾರೆ.
ವಿಧಾನಸೌಧದಲ್ಲಿ ದದ್ದಲ್ ಕಾಣಿಸಿದ ಬೆನ್ನಲ್ಲೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ʻನನಗೆ SIT ನೋಟಿಸ್ ನೀಡಿಲ್ಲ. ಇಡಿಯಿಂದಲೂ ನೋಟಿಸ್ ಬಂದಿಲ್ಲ. ನಾನು ಅಧಿವೇಶನಕ್ಕೆ ಹೋಗುತ್ತಿದ್ದೇನೆ. ಹೆಚ್ಚೆನೂ ಹೇಳುವುದಿಲ್ಲʼ ಎಂದು ಹೇಳಿ ತೆರಳಿದರು.
ಬಳಿಕ ಸಿಎಂ ಸಿದ್ದರಾಮಯ್ಯ ಅವರನ್ನ ಆಡಳಿತ ಪಕ್ಷದ ಕೊಠಡಿಯಲ್ಲಿ ಭೇಟಿ ಮಾಡಿ ಚರ್ಚೆ ಮಾಡಿದರು.