ಬೆಂಗಳೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಹೆಸರು ಘೋಷಣೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಹೆಸರು ಘೋಷಣೆ ಮಾಡಿದ್ದಾರೆ. ಬಾನು ಮುಷ್ತಾಕ್ ಅವರು ಹಿಂದೂ ಪರಂಪರೆ, ಹಿಂದೂ ಆಚಾರ ವಿಚಾರಗಳ ಮೇಲೆ ನಂಬಿಕೆ ಇಟ್ಟು ಬಂದರೆ ಸ್ವಾಗತ ಮಾಡುತ್ತೇವೆ. ಬಾನು ಮುಷ್ತಾಕ್ ಹಾಗೂ ಕೊಡಗಿನ ದೀಪಾ ಬಸ್ತಿ ಇಬ್ಬರಿಗೂ ಸೇರಿ ಬೂಕರ್ ಪ್ರಶಸ್ತಿ ಬಂದಿದೆ. ಆದರೆ, ಸರ್ಕಾರ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಮಾತ್ರ ಕರೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ದೀಪಾ ಬಸ್ತಿ ಅವರನ್ನು ಏಕೆ ಕರೆದಿಲ್ಲ? ಎಂದು ಪ್ರಶ್ನೆ ಮಾಡಿದರು.
ದೀಪಾ ಬಸ್ತಿ ಅವರನ್ನು ಏಕೆ ಕರೆಯಬೇಕು ಎಂಬ ಆಲೋಚನೆ ಸರ್ಕಾರಕ್ಕೆ ಬಂದಿಲ್ಲ? ಕೊಡಗಿನ ಬಗ್ಗೆ ಸಿಎಂಗೆ ಆಸಕ್ತಿ ಕಡಿಮೆ. ದಸರಾ ಧಾರ್ಮಿಕ ಸಂಪ್ರದಾಯ ಒಳಗೊಂಡ ಕಾರ್ಯಕ್ರಮ. ನಮಗೆ ಆಚಾರ ವಿಚಾರ, ಸಂಪ್ರದಾಯ ಎಲ್ಲವೂ ಗೊತ್ತಿದೆ ಎಂದು ಹೇಳಿದರು.





