Mysore
16
scattered clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಬೆಂಗಳೂರು: 8 ತಿಂಗಳ ಮಗುವಿಗೆ ಎಚ್‌ಎಂಪಿವಿ ವೈರಸ್‌ ಪತ್ತೆ

ಬೆಂಗಳೂರು: ಸದ್ಯ ಚೀನಾದಲ್ಲಿ ಅತಿ ಹೆಚ್ಚಾಗಿ ಸದ್ದು ಮಾಡುತ್ತಿರುವ ಎಚ್‌ಎಂಪಿವಿ ವೈರಸ್‌ ಇದೀಗ ಬೆಂಗಳೂರಿಗೆ ಕಾಲಿಟ್ಟಿದ್ದು, ಇಲ್ಲಿನ 8 ತಿಂಗಳ ಮಗುವಿನಲ್ಲಿ ಪತ್ತೆಯಾಗಿದೆ.

ಎಚ್‌ಎಂಪಿವಿ ಯಾವುದೇ ಟ್ರಾವೆಲ್‌ ಇತಿಹಾಸ ಇಲ್ಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂಟು ತಿಂಗಳ ಮಗುವಿನಲ್ಲಿ ಕಾಣಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಆ ಮಗುವಿಗೆ ಜ್ವರ ಬಂದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಇದೇ ವೇಳೆ ಆ ಮಗುವಿಗೆ ರಕ್ತ ಪರೀಕ್ಷೆ ಮಾಡಿಸಿದಾಗ ಎಚ್‌ಎಂಪಿವಿ ವೈರಸ್‌ ದೃಢಪಟ್ಟಿದೆ.

ಈ ವೈರಸ್‌ ಎಂಟು ತಿಂಗಳ ಪುಟ್ಟ ಮಗುವಿಗೆ ಡೆಡ್ಲಿ ವೈರಸ್‌ ಆಟ್ಯಾಕ್‌ ಆಗಿದ್ದು, ಬೆಂಗಳೂರಿಗೆ ಬಂದ ಮೊದಲ ಕೇಸ್‌ ಆಗಿದೆ. ಆದರೆ ಆರೋಗ್ಯ ಇಲಾಖೆಯೂ ಎಚ್‌ಎಂಪಿವಿ ವೈರಸ್‌ ಬಗ್ಗೆ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಮಾಹಿತಿ ನೀಡಿದೆ.

Tags:
error: Content is protected !!