ಬಾಗಲಕೋಟೆ : ಒಂದು ಕಡೆ ಡೆಂಗ್ಯೂ ಹಾವಳಿ ಜೋರಾಗಿದ್ದರೆ ಮತ್ತೊಂದು ಕಡೆ ವೈರಲ್ ಫೀವರ್ ಕಾಟ ಶುರುವಾಗಿದೆ. ಜಿಲ್ಲೆಯಲ್ಲಿ ವೈರಲ್ ಫೀವರ್ ನಿಂದಾಗಿ ಮಕ್ಕಳು ರೋಧಿಸುತ್ತಿದ್ದು, ಪ್ರತಿನಿಧಿ ೨೦೦ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೆಮ್ಮು, ನೆಗಡಿ, ಕಫ, ಉಸಿರಾಟ ತೊಂದರೆಯಿಂದ ಮಕ್ಕಳು ಬಳಲುತ್ತಿದ್ದು, ಆಸ್ಪತ್ರೆಗಳಲ್ಲಿ ಪುಟಾಣಿಗಳ ರೋಧನೆ ಹೆಚ್ಚಾಗುತ್ತಿದೆ.
ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಮಕ್ಕಳನ್ನ ದಾಖಲು ಮಾಡಿಸಿ ಪೋಷಕರು ಚಿಕಿತ್ಸೆ ಕೊಡಿಸುತ್ತಿದ್ದಾರೆ. ಮಕ್ಕಳ ಆಸ್ಪತ್ರೆಗಳು ಕೂಡ ಭರ್ತಿಯಾಗಿದೆ. ಒಪಿಡಿಯಲ್ಲಿ ೨೦೦ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದ್ರೆ, ಗಂಭೀರ ಪರಿಸ್ಥಿತಿಯ ಮಕ್ಕಳಿಗೆ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತದೆ