Mysore
14
overcast clouds

Social Media

ಶನಿವಾರ, 20 ಡಿಸೆಂಬರ್ 2025
Light
Dark

ಚಾರಣ ಪ್ರಿಯರಿಗೆ ಬೇಸರದ ಸುದ್ದಿ, ಈ ಪ್ರದೇಶಗಳಲ್ಲಿ ಚಾರಣ ನಿಷೇಧ!

ಚಿಕ್ಕಮಗಳೂರು: ಮಲೆನಾಡಿನ ಪ್ರಸಿದ್ಧ ಚಾರಣ ತಾಣಗಳಾದ ಮುಳ್ಳಯ್ಯನಗಿರಿ ಹಾಗೂ ಎತ್ತಿನಭುಜದಲ್ಲಿ ಚಾರಣಕ್ಕೆ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿದೆ.

ಮುಂಗಾರಿನಲ್ಲಿ ಚಿಕ್ಕಮಗಳೂರಿನ ಸೌಂದರ್ಯ ಇಮ್ಮಡಿಗೊಳ್ಳುತ್ತದೆ. ನೆರೆ ಜಿಲ್ಲೆ ಹಾಗೂ ರಾಜ್ಯದ ಮೂಲೆ ಮೂಲೆಯಿಂದಲೂ ಚಾರಣಿಗರು ಇಲ್ಲಿಗೆ ಆಗಮಿಸುತ್ತಾರೆ. ಕಾಫಿನಾಡಿನ ಸೌಂದರ್ಯ ಸವಿಯಲು ಚಾರಣಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲಿದೆ. ಆಗಾಗಿ ಎತ್ತಿಜ ಭುಜದ ಕಿರಿದಾದ ಪ್ರದೇಶದಲ್ಲಿ ಪ್ರದೇಶದಲ್ಲಿ ಪ್ರವಾಸಿಗರು ಟ್ರಕ್ಕಿಂಗ್‌ ಹೋಗುತ್ತಿದ್ದಾರೆ. ಇದರಿಂದ ಏನಾದರೂ ಅನಾಹುತ ಸಂಭವಿಸಬಹುದು ಎಂಬ ಮುನ್ನೆಚ್ಚರಿಕೆಯಿಂದ ಟ್ರಕ್ಕಿಂಗ್‌ ಹೋಗುವ ಮಾರ್ಗದಲ್ಲಿ ಅಗತ್ಯ ಸೌಕರ್ಯ ಒದಗಿಸುವ ಪೂರಕ ಕಾಮಗರಿಗಳು ನಡೆಯುತ್ತಿದೆ. ಆಗಾಗಿ ಮುಂದಿನ ಆದೇಶದವರೆಗೆ ಎತ್ತಿನಭುಜ ಹಾಗೂ ಮುಳ್ಳಯ್ಯನಗಿರಿ ಚಾರಣ ಚಟುವಟಿಕೆಯನ್ನು ನಿರ್ಬಂಧಿಸಲಾಗಿದೆ.

 

Tags:
error: Content is protected !!