ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ರಾಜ್ಯಕ್ಕೆ ಬಂದಿರುವುದು ಪಕ್ಷದ ಸಂಘಟನೆಗೆ ಹೊರತು ಆಂತರಿಕ ವಿಚಾರದ ಚರ್ಚಿಸಲು ಅಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಡಿ.3) ತರುಣ್ ಚುಗ್ ರಾಜ್ಯಕ್ಕೆ ಆಗಮಿಸಿರುವ ಹಿನ್ನೆಲೆ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ತರುಣ್ ರಾಜ್ಯಕ್ಕೆ ಆಗಮಿಸಿರುವುದು ಬಿಜೆಪಿ ಪಕ್ಷದ ಸಂಘಟನೆಗಾಗಿ ಮಾತ್ರ. ಅದನ್ನು ಬಿಟ್ಟರೆ ಯಾವ ಉದ್ದೇಶದಿಂದ ಬಂದಿಲ್ಲ. ಒಂದು ವೇಳೆ ಆಂತರಿಕ ವಿಚಾರದ ಬಗ್ಗೆ ಚರ್ಚಿಸಲೇಬೇಕು ಎಂಬಂತಿದ್ದರೆ ರಾಧಾಮೋಹನ್ ಸಿಂಗ್ ಅವರು ಬರುತ್ತಿದ್ದರು ಎಂದಿದ್ದಾರೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಇಂದು ಪಕ್ಷದ ಸಂಘಟನಾ ಪರ್ವದ ಚಟುವಟಿಕೆಗಳ ಭಾಗವಾಗಿ ಇಡೀ ದಿನ ಸರಣಿ ಸಭೆಗಳು ನಡೆಯಲಿದೆ. ಹೀಗಾಗಿ ಅಭಿಪ್ರಾಯಗಳ ಸಂಗ್ರಹಣೆ ಉದ್ದೇಶವಿಲ್ಲ, ಸಂಘಟನಾತ್ಮಕ ಬಿಟ್ಟು ಬೇರೆ ವಿಷಯಗಳ ಚರ್ಚೆಗೆ ಅವಕಾಶವಿಲ್ಲ ಎಂದು ಹೇಳಿದ್ದಾರೆ.