ಬೆಂಗಳೂರು: ನಾಳೆ ಮಾಜಿ ಶಾಸಕರು, ಮಾಜಿ ಸಂಸದರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಭೋಜನಕೂಟ ಏರ್ಪಡಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಡಿನ್ನರ್ ಪಾರ್ಟಿ ಭಾರೀ ಸದ್ದು ಮಾಡುತ್ತಿರುವ ಬೆನ್ನಲ್ಲೇ ಬಿಜೆಪಿಯಲ್ಲಿಯೂ ಡಿನ್ನರ್ ಪಾರ್ಟಿ ಪಾಲಿಟಿಕ್ಸ್ ಶುರುವಾಗಿದೆ.
ನಾಳೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ವಿಜಯೇಂದ್ರ ಅವರು ಭೋಜನಕೂಟ ಆಯೋಜಿಸಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದ್ದು, ಬಳಿಕ ಔತಣಕೂಟ ನಡೆಯಲಿದೆ. ಇದರಲ್ಲಿ ಮಾಜಿ ಶಾಸಕರು ಹಾಗೂ ಮಾಜಿ ಸಂಸದರು ಕೂಡ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಮೂಲಕ ಹಾಲಿ ಹಾಗೂ ಮಾಜಿಗಳ ವಿಶ್ವಾಸಗಳಿಸಲು ವಿಜಯೇಂದ್ರ ಮುಂದಾಗಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ.