Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಹಿರಿಯ ನಾಗರಿಕರಿಗೆ ಆಯುಷ್ಮಾನ್‌ ವಂದನ್‌ ಕಾರ್ಡ್‌: ದೇಶದಲ್ಲೇ ಕರ್ನಾಟಕ 6ನೇ ಸ್ಥಾನ

ಮಂಗಳೂರು: 70 ವರ್ಷ ಮೀರಿದ ಹಿರಿಯ ನಾಗರಿಕರಿಗೆ ಆಯುಷ್ಮಾನ್‌ ವಂದನ್‌ ಕಾರ್ಡ್‌ ನೋಂದಣಿಯಲ್ಲಿ ದೇಶದಲ್ಲಿಯೇ ಕರ್ನಾಟಕ ಆರನೇ ಸ್ಥಾನದಲ್ಲಿದೆ. ಇನ್ನು ರಾಜ್ಯದಲ್ಲಿ ಬೆಂಗಳೂರು, ಮೈಸೂರು, ಹಾಗೂ ಕರಾವಳಿ ಜಿಲ್ಲೆಗಳು ಪ್ರಗತಿಯ ಕಡೆ ಸಾಗಿವೆ.

ವಯೋವೃದ್ಧರಿಗೆ ಮಾತ್ರ ಕಾರ್ಡ್‌ ನೋಂದಣಿ ಆಗುತ್ತಿದೆ. ಆದರೆ ಈ ಯೋಜನೆಯಿಂದ ಲಭ್ಯವಿರುವ ಸೇವೆಗಳು ಮಾತ್ರ ಇನ್ನು ದೂರದ ಮಾತಾಗಿವೆ.

ದೇಶದಲ್ಲಿ ಮಧ್ಯಪ್ರದೇಶ ರಾಜ್ಯ ಈ ಯೋಜನೆಯಲ್ಲಿ ಅತಿ ಹೆಚ್ಚು ಫಲಾನುಭವಿಗಳನ್ನು ಹೊಂದಿದೆ. ಇಲ್ಲಿ 10,01,497 ಮಂದಿ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಕೇರಳ 4,54,878 ಹಿರಿಯರು, ಉತ್ತರಪ್ರದೇಶ 4,23,232 ಮಂದಿ, ಗುಜರಾತ್‌ 2,93,234 ಮಂದಿ, ಬಿಹಾರದಲ್ಲಿ 1,19,234 ಮಂದಿ, ಕರ್ನಾಟಕದಲ್ಲಿ 86,803 ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ.

ನೋಂದಣಿ ಪ್ರಮಾಣ ತೀರಾ ಕಡಿಮೆ ಇರುವ ರಾಜ್ಯಗಳು ನಾಗಾಲ್ಯಾಂಡ್‌ 138 ಮಂದಿ, ಮೇಘಾಲಯ 56 ಮಂದಿ, ಮತ್ತು ಮಿಜೋರಾಂ 48 ಮಂದಿ ಹಿರಿಯರು ಇದ್ದಾರೆ.

ಈ ಯೋಜನೆಯಲ್ಲಿ ಬಿಪಿಎಲ್‌ ಕಾರ್ಡ್‌ದಾರರಿಗೆ ಚಿಕಿತ್ಸೆ ಸಂಪೂರ್ಣ ಉಚಿತವಿದ್ದು, ಎಪಿಎಲ್‌ ಕಾರ್ಡ್‌ದಾರರಿಗೆ ಶೇ.30ರಷ್ಟು ಮಾತ್ರ ಸರ್ಕಾರ ಭರಿಸುತ್ತದೆ. ಉಳಿದಂತೆ ಇನ್ನು ಶೇ.70 ರಷ್ಟನ್ನು ರೋಗಿಗಳೇ ಪಾವತಿ ಮಾಡಬೇಕು.

ಈ ಯೋಜನೆಯಲ್ಲಿರುವ ಚಿಕಿತ್ಸೆ ಸೌಲಭ್ಯ:
ಭಾರತ್‌ 2023 ಆರೋಗ್ಯ ಯೋಜನೆ (ಎಬಿಪಿಎಂಜೆಎವೈ)ಯನ್ನು ಆಯುಷ್ಮಾನ ಭಾರತ್‌ ಮಂತ್ರಿ ಕರ್ನಾಟಕ ಟ್ರಸ್ಟ್‌ ಅಡಿಯಲ್ಲಿ ವೇದಿಕೆ ಕಲ್ಪಿಸಲಾಗಿದೆ.

2024ರ ಅ.29ರಿಂದ 70 ವರ್ಷ ಮೇಲ್ಪಟ್ಟ ಎಲ್ಲ ಹಿರಿಯ ನಾಗರಿಕರಿಗೂ ಈ ಯೋಜನೆ ವಿಸ್ತರಿಸಲಾಗಿದೆ. ಇದರಲ್ಲಿ ಮುಖ್ಯವಾಗಿ ಆಂಜಿಯೋಪ್ಲಾಸ್ಟಿ, ಹಿಪ್‌ ರಿಪ್ಲೇಶ್‌ ಮೆಂಟ್‌, ಗ್ಯಾಲ್‌ ಬ್ಲ್ಯಾಡ್ ತೆಗೆದಿರುವುದು, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ, ಹೀಮೋ ಡಯಾಲಿಸಿಸ್‌, ಎಂಟರಿಕ್‌ ಫಿವರ್‌ ಇನ್ನಿತರ ಕಾಯಿಲೆ ಸಮಸ್ಯೆಗಳಿಗೆ ಈ ಕಾರ್ಡ್‌ ಬಳಸಿ ಚಿಕಿತ್ಸೆ ಪಡೆಯಬಹುದಾಗಿದೆ.

Tags: