Mysore
33
scattered clouds

Social Media

ಶುಕ್ರವಾರ, 03 ಏಪ್ರಿಲ 2026
Light
Dark

ಅನಿಲ ಬಿಕ್ಕಟ್ಟಿನ ನಡುವೆ ಆಟೋ ಎಲ್‌ಪಿಜಿ ಪೂರೈಕೆ ಹೆಚ್ಚಳ

ಬೆಂಗಳೂರು : ಪಶ್ಚಿಮ ಕೊಲ್ಲಿ ರಾಷ್ಟ್ರಗಳ ಯುದ್ಧದಿಂದಾಗಿ ಇದೀಗ ದೇಶದಲ್ಲಿ ಅನಿಲ ಬಿಕ್ಕಟ್ಟು ಎದುರಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ಭಾಗಗಳಲ್ಲಿ ಹಲವಾರು ಖಾಸಗಿ ಆಟೋ ಎಲ್‌ಪಿಜಿ ಔಟ್‌ಲೆಟ್‌ಗಳಲ್ಲಿ ಅನಿಲ ಪೂರೈಕೆಯಲ್ಲಿ ವ್ಯತ್ಯಯವುಂಟಾಗಿದೆ.

ಈ ಬೆನ್ನಲ್ಲೆ, ಇದನ್ನು ಪರಿಹರಿಸಲು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಇಂಡಿಯನ್ ಆಯಿಲ್) ಮುಂದಾಗಿದ್ದು,ರಾಜ್ಯದಾದ್ಯಂತ ತನ್ನ ಆಟೋ ಎಲ್‌ಪಿಜಿ ಸರಬರಾಜನ್ನು ಗಮನಾರ್ಹವಾಗಿ ಹೆಚ್ಚಿಸಿದೆ.

ಚೆನ್ನೈನ ದಕ್ಷಿಣ ಪ್ರಾದೇಶಿಕ ಕಚೇರಿಯ ಇಂಡಿಯನ್ ಆಯಿಲ್‌ನ ಮುಖ್ಯ ಮಹಾಪ್ರಬಂಧಕ ವಿ. ವೆಟ್ರಿಸೆಲ್ವಕುಮಾರ್ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ, ಆಟೋ LPG ವಿತರಣಾ ಕೇಂದ್ರಗಳ ಮೂಲಕ ಆಟೋ ರಿಕ್ಷಾಗಳು ಮತ್ತು ಎಲ್‌ಪಿಜಿ ಚಾಲಿತ ಕಾರುಗಳ ಇಂಧನ ಅವಶ್ಯಕತೆಗಳನ್ನು ಪೂರೈಸುತ್ತಿದೆ. tನ್ನ ಮೂಲಸೌಕರ್ಯದ ಮೇಲೆ ಹೆಚ್ಚು ಒತ್ತು ನೀಡಿ ಬೇಡಿಕೆಯನ್ನು ಪೂರೈಸಲು ಇಂಡಿಯನ್ ಆಯಿಲ್ ಮುಂದಾಗಿದೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ರಾಜ್ಯದಲ್ಲಿ ಇಂಡಿಯನ್ ಆಯಿಲ್‌ನ ಆಟೋ LPG ವಿತರಣಾ ಕೇಂದ್ರಗಳಲ್ಲಿ ಸರಾಸರಿ ದೈನಂದಿನ ಮಾರಾಟವು 59.53 ಮೆಟ್ರಿಕ್ ಟನ್‌ಗಳಿಗೆ ಏರಿಕೆಯಾಗಿದೆ. ಇಂಡಿಯನ್ ಆಯಿಲ್ ಸಂಸ್ಥೆಯು ರಾಜ್ಯದ ಎಲ್ಲಾ ಆಟೋ LPG ಕೇಂದ್ರಗಳಲ್ಲಿ ಸುಗಮ ಪೂರೈಕೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದು, ಆಟೋ ರಿಕ್ಷಾ ಚಾಲಕರು ಮತ್ತು LPG ವಾಹನ ಬಳಕೆದಾರರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Tags:
error: Content is protected !!