Mysore
28
few clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಆ.27 ಕೆಪಿಎಸ್‌ಸಿ ಪರೀಕ್ಷೆ: ಮುಂದೂಡಿಕೆ ಇಲ್ಲದ ಬಗ್ಗೆ ಸರ್ಕಾರದ ಸ್ಪಷ್ಟನೆ

ಬೆಂಗಳೂರು: ಕೆಎಎಸ್‌ ಪೂರ್ವಭಾವಿ ಪರೀಕ್ಷೆಯು ಆಗಸ್ಟ್‌ 27 ರಂದು ನಡೆಯಲಿದೆ. ಯಾವುದೇ ಕಾರಣಕ್ಕೂ ಮುಂದೂಡುವುದಿಲ್ಲ. ಅಭ್ಯರ್ಥಿಗಳು ತಯಾರಿಯಾಗಲೂ ಸಾಕಷ್ಟು ಸಮಯ ನೀಡಲಾಗಿದೆ. ತರಾತುರಿಯಲ್ಲೇನು ಪರೀಕ್ಷೆ ನಡೆಸುತ್ತಿಲ್ಲ ಎಂದು ಸರ್ಕಾರ ಸ್ಟಷ್ಟಪಡಿಸಿದೆ.

ಕೆಲ ಆಕಾಂಕ್ಷಿಗಳು ಪರೀಕ್ಷೆಯನ್ನು ಮುಂದೂಡುವಂತೆ ಪ್ರತಿಭಟನೆ ಮಾಡುತ್ತಿದ್ದಾರೆ. ಸದ್ಯ ಈ ವಿಚಾರವಾಗಿ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸರ್ಕಾರ, ಪರೀಕ್ಷೆ ಮುಂದೂಡುವಂತೆ ಕೆಲ ಕೆಎಎಸ್ ಆಕಾಂಕ್ಷಿಗಳು ಹಿರಿಯ ಅಧಿಕಾರಿಗಳಿಂದ ಒತ್ತಡ ತರುತ್ತಿದ್ದಾರೆ. ಅಲ್ಲದೇ, ಅವರು ಕೆಪಿಎಸ್ಸಿಯಲ್ಲಿ ಹಗರಣ ನಡೆದಿದೆ ಎಂದು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಆದರೆ, ಯಾವುದೇ ಹಗರಣ ನಡೆದಿಲ್ಲ. ಆಗಸ್ಟ್‌ 27ರಂದೇ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದೆ.

ಅಂದು ನಡೆಯುವ ಪರೀಕ್ಷೆಯಲ್ಲಿ 2017-18 ರಲ್ಲಿ ಪರೀಕ್ಷೆ ಬರೆದಿದ್ದ 1500 ಅಭ್ಯರ್ಥಿಗಳು ಸೇರಿ ಒಟ್ಟು2.5ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಕೆಎಎಸ್‌ ಪೂರ್ವಭಾವಿ ಪರೀಕ್ಷೆಯನ್ನು ಅಧಿಸೂಚನೆ ಪ್ರಕಟವಾದ ದಿನದಿಂದ ಈವರೆಗೂ ಯುಪಿಎಸ್‌ಸಿ ಪರೀಕ್ಷೆ, ಲೋಕಸಭಾ ಚುನಾವಣೆ ಹಾಗೂ ಅಭ್ಯರ್ಥಿಗಳ ಮನವಿ ಮೇರೆಗೆ ಐದರಿಂದ ಆರು ಬಾರಿ ಪರೀಕ್ಷೆ ದಿನಾಂಕವನ್ನು ಮುಂದೂಡಲಾಗಿದೆ. ಆದ್ದರಿಂದ, ಅಭ್ಯರ್ಥಿಗಳಿಗೆ ಪರೀಕ್ಷೆಗೆ ತಯಾರಿಯಾಗಲು ಸಾಕಷ್ಟು ಸಮಯ ನೀಡಲಾಗಿದೆ ಎಂಬ ಅಂಶವು ಸ್ಪಷ್ಟವಾಗಿದೆ. ಕೆಪಿಎಸ್‌ಸಿ ತರಾತುರಿಯಲ್ಲಿ ಪರೀಕ್ಷೆ ನಡೆಸುತ್ತಿದೆ ಎಂದು ಹೇಳಲು ಯಾವುದೇ ಆಧಾರವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಪ್ರಶ್ನೆ ಪತ್ರಿಕೆಗಳ ಮುದ್ರಣಕ್ಕೆ ಸುಮಾರು 4-5 ಕೋಟಿ ಖರ್ಚಾಗುತ್ತದೆ. ಎರಡು ತಿಂಗಳು ಮುಂದೂಡಿ ಎಂದರೆ ಮುದ್ರಿತ ಪತ್ರಿಕೆಗಳನ್ನು ನಾಶಪಡಿಸಿ ಹೊಸ ಪತ್ರಿಕೆಗಳನ್ನು ಮುದ್ರಿಸಬೇಕು. ಅಲ್ಲದೇ, ಪೇಪರರ್‌ ಸೋರಿಕೆಯಾಗುವ ಅಪಾಯವಿರುವುದರಿಂದ ಪೇಪರ್‌ಗಳನ್ನು ಹೆಚ್ಚು ಹೊತ್ತು ಇಡುವಂತಿಲ್ಲ ಎಂದು ಹೇಳಿದೆ.

Tags: