Mysore
20
overcast clouds
Light
Dark

ಕ್ಯಾಪ್ಸೂಲ್‌ ಮೂಲಕ ಕೊಕೇನ್‌ ಸಾಗಾಟಕ್ಕೆ ಯತ್ನ: ಆರೋಪಿ ಬಂಧನ

ಬೆಂಗಳೂರು: ಇಥಿಯೋಪಿಯಾದಿಂದ ಕೋಟ್ಯಾಂತರ ರೂಪಾಯಿ ಮೌಲ್ಯದ ಕೊಕೆನ್‌ನ್ನು ಕ್ಯಾಪ್ಸುಲ್‌ಗಳ ರೂಪದಲ್ಲಿ ಸಾಗಿಸುತ್ತಿದ್ದ ವಿದೇಶಿ ಪ್ರಜೆ ಕೆಂಪೇಗೌಡ ಏರ್​ಪೋರ್ಟ್‌ನಲ್ಲಿ ಸಿಕ್ಕಿಬಿದ್ದಿದ್ದಾನೆ. ಸಿನಿಮೀಯ ರೀತಿಯಲ್ಲಿ 20 ಕೋಟಿ ರೂ. ಮೌಲ್ಯದ 2 ಕೆಜಿ ಕೊಕೇನ್ ಕ್ಯಾಪ್ಸೂಲ್‍ಗಳನ್ನು ನುಂಗಿಕೊಂಡು ಸಾಗಿಸುತ್ತಿದ್ದ ವ್ಯಕ್ತಿಯನ್ನು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಆರೋಪಿ ಅಡಿಸ್ ಅಬಾಬಾದಿಂದ ಇಥಿಯೋಪಿಯಾ ಏರ್ಲೈನ್ಸ್‌ನಲ್ಲಿ ಬಂದಿದ್ದ. ಆತನ ಹೊಟ್ಟೆಯಲ್ಲಿ ಸುಮಾರು 50ಕ್ಕೂ ಹೆಚ್ಚಿನ ಕೊಕೇನ್ ಕ್ಯಾಪ್ಸೂಲ್ಸ್ ಪತ್ತೆಯಾಗಿವೆ. ಕ್ಯಾಪ್ಸೂಲ್‍ಗಳಲ್ಲಿ ಕೊಕೇನ್ ತುಂಬಿ ಅದನ್ನು ಆರೋಪಿ ನುಂಗಿಕೊಂಡು ಸಾಗಿಸುತ್ತಿದ್ದ. ಬಳಿಕ ಆತನ ಹೊಟ್ಟೆಯನ್ನು ಸ್ಕ್ಯಾನ್ ಮಾಡಿ, ಹೊಟ್ಟೆಯಲ್ಲಿದ್ದ ಕ್ಯಾಪ್ಸೂಲ್‍ಗಳನ್ನು ವೈದ್ಯರು ಹೊರಗೆ ತೆಗೆದಿದ್ದಾರೆ.

ಆರೋಪಿ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಆತನನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ