ಬೆಂಗಳೂರು: ವಿಧಾನಸಭೆ ಮಳೆಗಾಲದ ಅಧಿವೇಶನ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಹೋರಾಟಕ್ಕಿಳಿದಿವೆ.
ನಿನ್ನೆ ಕೂಡ ವಿಧಾನಮಂಡಲದಲ್ಲಿ ಸದನ ಕದನ ತುಂಬಾ ಜೋರಾಗಿತ್ತು. ಇಂದು ಮೂರನೇ ದಿನದ ಕಲಾಪ ಆರಂಭಗೊಂಡಿದ್ದು, ಹತ್ತು ಹಲವು ವಿಚಾರಗಳನ್ನು ಸರ್ಕಾರದ ಮುಂದಿಟ್ಟು ಹೋರಾಟ ನಡೆಸುವ ಸಾಧ್ಯತೆಯಿದೆ.
ನಿನ್ನೆಯಂತೂ ಸದನದಲ್ಲಿ ಕೆ.ಎನ್.ರಾಜಣ್ಣ ತಲೆದಂಡ ಬಗ್ಗೆ ಸುದೀರ್ಘ ಚರ್ಚೆ ನಡೆಸುವಂತೆ ವಿಪಕ್ಷಗಳು ಪಟ್ಟು ಹಿಡಿದಿದ್ದವು. ಜೊತೆಗೆ ಧರ್ಮಸ್ಥಳ ಪ್ರಕರಣ, ಆನ್‌ಲೈನ್ ಗೇಮ್, ಆರ್‌ಸಿಬಿ ಕಾಲ್ತುಳಿತ ದುರಂತ ಪ್ರಕರಣ ಸೇರಿದಂತೆ ಹತ್ತು ಹಲವು ವಿಚಾರಗಳನ್ನು ಚರ್ಚೆ ನಡೆಸಿ ಕೋಲಾಹಲ ಸೃಷ್ಟಿಯಾಗಿತ್ತು.
ಇಂದು ಕೂಡ ಸದನದಲ್ಲಿ ಕೋಲಾಹಲವೇ ನಡೆಯುವ ಸಾಧ್ಯತೆಯಿದ್ದು, ಸರ್ಕಾರದ ವಿರುದ್ಧ ವಿಪಕ್ಷಗಳು ಮುಗಿಬೀಳುವ ಸಾಧ್ಯತೆಯಿದೆ.





