Mysore
25
clear sky

Social Media

ಮಂಗಳವಾರ, 24 ಮಾರ್ಚ್ 2026
Light
Dark

ವಿಧಾನಸಭೆ ಕಲಾಪ: ಸಚಿವರ ಗೈರು, ಪ್ರತಿಪಕ್ಷಗಳಿಂದ ಕೆಲಕಾಲ ಸಭಾತ್ಯಾಗ

ಬೆಂಗಳೂರು: ವಿಧಾನಸಭೆಯ ಕಲಾಪ ಆರಂಭದಲ್ಲಿ ಮೊದಲ ಸಾಲಿನಲ್ಲಿ ಆಡಳಿತ ಪಕ್ಷದ ಸಚಿವರಿಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷಗಳ ಶಾಸಕರು ಕೆಲಕಾಲ ಸಭಾತ್ಯಾಗ ಮಾಡಿದರು.

ಗುರುವಾರ(ಜು.18)ಬೆಳಿಗ್ಗೆ ವಿಧಾಸಭೆ ಕಲಾಪ ಆರಂಭವಾದಾಗ ಕೂಡಲೇ ಎದ್ದು ನಿಂತ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌, ಡಾ.ಸಿ.ಎನ್‌ ಅಶ್ವಸ್ಥನಾರಾಯಣ್‌ ಸಚಿವರಿಲ್ಲ ಎಂದು ಆಕ್ಷೇಪವೆತ್ತಿದರು.

ಕಲಾಪದ ಮೊದಲ ಸಾಲಿನಲ್ಲಿ ಯಾವ ಸಚಿವರು ಇಲ್ಲ. ಶೂನ್ಯವಿದೆ. ನವೆಲ್ಲಾ ಸರಿಯಾದ ಸಮಯಕ್ಕೆ ಬಂದಿದ್ದೇವೆ. ಅಧಿವೇಶನ ಚೆನ್ನಾಗಿ ನಡೆಯಬೇಕು ಎಂದು ಹೊಸ ನಿಯಮ ಜಾರಿಗೆ ತಂದಿದ್ದೀರಿ. ಆದರೆ ಆಡಳಿತ ಪಕ್ಷದ ಸಚಿವರೇ ಬಂದಿಲ್ಲ ಹೀಗಾದರೆ ಹೇಗೆ ಎಂದು ಪ್ರಶ್ನಿಸಿದರು.

ಅಷ್ಟರಲ್ಲಿ ಸದನಕ್ಕೆ ಆಗಮಿಸಿದ ಸಚಿವ ಡಾ.ಹೆಚ್.ಸಿ ಮಹದೇವಪ್ಪ, ನಾವು ಮೂರ್ನಾಲ್ಕು ಸಚಿವರಿದ್ದೇವೆ. ಅವರು ಚರ್ಚೆ ಮಾಡಲಿ. ಸರ್ಕಾರ ಉತ್ತರ ನೀಡುತ್ತದೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರತಿಪಕ್ಷದ ನಾಯಕ ಆರ್.ಅಶೋಕ್‌, ಅಧಿವೇಶನಕ್ಕಾಗಿ ಕೋಟ್ಯಂತರ ರೂ ಖರ್ಚಾಗುತ್ತದೆ. ಶಾಸಕರಿಗೆ ಊಟ, ತಿಂಡಿ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಇವರಿಗೆ ಏನು ದಾಡಿ ಬಂದಿದೆ. ಬೇಜವಾಬ್ದಾರಿಯಿಂದ ಸರ್ಕಾರ ನಡೆದುಕೊಳ್ಳುತ್ತಿದೆ. ಇದನ್ನು ಪ್ರತಿಭಟಿಸಿ ನಾವು ಸಭಾತ್ಯಾಗ ಮಾಡುತ್ತೇನೆ ಎಂದು ಹೇಳಿ ಹೊರನಡೆದರು. ಈ ವೇಳೆ ಜೆಡಿಎಸ್‌ ಶಾಸಕರು ಕೂಡ ಅವರನ್ನು ಹಿಂಬಾಲಿಸಿ ಸದನದಿಂದ ಹೊರನಡೆದರು.

ನಂತರ ಸಭಾಧ್ಯಕ್ಷರು ಮಾತನಾಡಿ, ಸುಗಮ ಕಲಾಪ ಆಗಬೇಕು. ಏನೇ ಕೆಲಸವಿದ್ದರೂ ಸಕಲಾಕ್ಕೆ ಸದನಕ್ಕೆ ಹಾಜರಾಗುವುದನ್ನು ರೂಢಿಸಿಕೊಳ್ಳಬೇಕು ಎಂದರು.

ಎಲ್ಲರಲ್ಲೂ ಮನಃ ಪರಿವರ್ತನೆಯಾಗಬೇಕು. ಮಂಗಳವಾರ ಸದನಕ್ಕೆ ಬೇಗ ಬಂದ ಶಾಸಕರು ಹೆಸರು ಉಲ್ಲೇಖಿಸಿ ರೈತನಿಗೆ ಮಾಲ್‌ನಲ್ಲಿ ಅಪಮಾನ ಮಾಡಿದ ವಿಚಾರವನ್ನು ಪ್ರಸ್ತಾಪಿಸಲು ಸಭಾಧ್ಯಕ್ಷರು ಮುಂದಾದರು. ಅಷ್ಟರಲ್ಲಿ ವಿರೋಧಪಕ್ಷದ ಶಾಸಕರು ಸದನಕ್ಕೆ ಆಗಮಿಸಿದರು.

Tags:
error: Content is protected !!