Mysore
20
clear sky

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಅಪ್ಪು ಎಲ್ಲೂ ಹೋಗಿಲ್ಲ, ನಮ್ಮ ಜೊತೆನೇ ಇದ್ದಾನೆ : ತಮ್ಮನನ್ನು ನೆನೆದು ಶಿವಣ್ಣ ಭಾವುಕ

ಬೆಂಗಳೂರು : ಪುನೀತ್ ರಾಜ್‌ಕುಮಾರ್ ಅವರು ಅಗಲಿ ಇಂದಿಗೆ 2 ವರ್ಷಗಳು ಉರುಳಿವೆ. ಅಪ್ಪು ಸಮಾಧಿಗೆ ಕುಟುಂಬಸ್ಥರಿಂದ ಪೂಜೆ ನೆರವೇರಿತ್ತು. ಇದೀಗ ಅಪ್ಪು ಸ್ಮಾರಕಕ್ಕೆ ಶಿವಣ್ಣ ದಂಪತಿ ಭೇಟಿ ನೀಡಿದ್ದಾರೆ. ಈ ವೇಳೆ ಪುನೀತ್ ಬಗ್ಗೆ ಶಿವಣ್ಣ ಭಾವುಕರಾಗಿದ್ದಾರೆ.

ಅಪ್ಪು ಎಲ್ಲೂ ಹೋಗಿಲ್ಲ, ನಮ್ಮ ಜೊತೆನೇ ಇದ್ದಾರೆ. ಇಲ್ಲಿ ಯಾಕೆ ನಾನು ಜಾಸ್ತಿ ಬರಲ್ಲ ಅಂದರೆ, ಅಪ್ಪು ಸಮಾಧಿಗೆ ಬಂದು ಪೂಜೆ ಮಾಡಿ ಅವರನ್ನು ಇಲ್ಲಿಂದ ದೂರ ಕಳಿಸೋಕೆ ಮನಸ್ಸಿಗೆ ತುಂಬಾ ನೋವಾಗುತ್ತದೆ. ಅಪ್ಪು ಯಾವಾಗಲೂ ನಮ್ಮ ಮನಸ್ಸಿನಲ್ಲಿ, ಯೋಚನೆಯಲ್ಲಿರುತ್ತಾರೆ. ಅವರ ಬಗ್ಗೆ ಏನಾದರೂ ಮಾತು ಬಂದೇ ಬರುತ್ತೆ ಮನೆಯಲ್ಲಿ ಆಗ ತುಂಬಾ ಹರ್ಟ್ ಆಗುತ್ತದೆ. ಅಪ್ಪು ಕಣ್ಣು ನಮ್ಮನ್ನ ನೋಡ್ತಿದೆ. ಅದೇ ಸಮಾಧಾನ ಅಷ್ಟೇ ಎಂದು ಶಿವಣ್ಣ ಭಾವುಕರಾಗಿದ್ದಾರೆ.

ನಮ್ಮ ಅಪ್ಪನಿಗಿಂತ ಡಬಲ್ ಹೆಸರು ಪುನೀತ್ ಸಂಪಾದಿಸಿದ್ದಾರೆ. ಅಭಿಮಾನಿಗಳಿಗೆ ಅಪ್ಪು ಮೇಲಿರೋ ಪ್ರೀತಿ, ವಿಶ್ವಾಸ ನೋಡಿದ್ರೆ ತುಂಬಾ ಹೆಮ್ಮೆ ಅನಿಸುತ್ತದೆ. ಅದನ್ನ ನಾವು ಉಳಿಸಿಕೊಂಡು ಹೋಗುತ್ತೇವೆ ಎಂದು ಶಿವರಾಜ್‌ಕುಮಾರ್ ಹೇಳಿದರು.

ಕಂಠೀರವ ಸ್ಟುಡಿಯೋಗೆ ಆಗಮಿಸಿದ ಶಿವಣ್ಣ ದಂಪತಿ, ಮೊದಲು ತಂದೆ-ತಾಯಿ ಸಮಾಧಿಗೆ ನಮಸ್ಕರಿಸಿ ಬಳಿಕ ಅಪ್ಪು ಸಮಾಧಿಗೆ ನಮಿಸಿದರು. ಈ ವೇಳೆ, ಶಿವಣ್ಣ ನೋಡಲು ಅಭಿಮಾನಿಗಳ ದಂಡೇ ಭಾಗಿಯಾಗಿತ್ತು. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಲಾಠಿ ಪ್ರಹಾರ ಮಾಡಬೇಕಾಯಿತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ