Mysore
22
broken clouds

Social Media

ಗುರುವಾರ, 13 ಮಾರ್ಚ್ 2025
Light
Dark

ಹಿಂದುಳಿದ ವರ್ಗಗಳ ಸಂಪಾದಕ ಮತ್ತು ವರದಿಗಾರರ ಸಂಘದ ವಾರ್ಷಿಕ ಪ್ರಶಸ್ತಿ ಪ್ರಕಟ

ಬೆಂಗಳೂರು :  ಹಿಂದುಳಿದ ವರ್ಗಗಳ ಕರ್ನಾಟಕ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘ ಪ್ರಸಕ್ತ ವರ್ಷದ ದಿವಂಗತ ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಿದೆ.

ಕಳೆದ ವರ್ಷದಂತೆ ಈ ವರ್ಷದಲ್ಲಿ 5 ಜನ ಸಾಧಕರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ, ಇದೇ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಮಣಿಯವರ ವಿರಚಿತ ಒಳಕೋರೆ ಪುಸ್ತಕವನ್ನು ಬಿಡುಗಡೆಗೊಳಿಸಲಾಗುತ್ತಿದೆ.

ತುಳಿತಕ್ಕೊಳಗಾದ ಸಮುದಾಯಗಳ ಪರ ದ್ವನಿಯಾಗಿದ್ದ ಹಿರಿಯ ಸಾಹಿತಿ ಕೆ.ಶರೀಪಾ, ಲಂಕೇಶ್ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ ವರದಿಗಾರರಾಗಿ, ಸಂಪಾದಕರಾಗಿ ಸೇವೆ ಸಲ್ಲಿಸಿ ಹೆಸರು ಮಾಡಿರುವ ಹಿರಿಯ ಪತ್ರಕರ್ತ ಐ.ಎಚ್.ಸಂಗಮ್ ದೇವ್, ಹಿಂದುಳಿದ ವರ್ಗಗಳ ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸಿರುವ ನಳಿನಾಕ್ಷಿ ಸಣ್ಣಪ್ಪ, ಸಮಾಜ ಸೇವೆಯಲ್ಲಿ ಅನುಪಮ ಸೇವೆ ಸಲ್ಲಿಸಿರುವ ಎಂ.ನಾಗವೇಣಿ, ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಕನ್ನಡ ಭಾಷಾ ಉಳಿವಿಗಾಗಿ ಕನ್ನಡ ಭಾಷೆ ಪತ್ರಿಕೆ ಆರಂಭಿಸಿ ಶೋಷಿತರ ದ್ವನಿಯಾಗಿರುವ ಸಂಧ್ಯಾಕಾಲ ಪತ್ರಿಕೆಯ ಸಂಪಾದಕ ಶಿವಲಿಂಗಪ್ಪ ಅವರುಗಳಿಗೆ ವಿ.ಪಿ.ಸಿಂಗ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಗಂಧರ್ವ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಪ್ಪ ಹೆಚ್.ಜಿ. ಕಾರ್ಯದರ್ಶಿ ಶಿವಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿ ಪ್ರಧಾನ ಸಮಾರಂಭ ಇದೇ ತಿಂಗಳ 15ರಂದು ಕ್ವೀನ್ಸ್ ರಸ್ತೆಯ ಕೃಷಿ ತಂತ್ರಜ್ಞರ ಇಲಾಖೆಯ ಸಭಾಂಗಣದಲ್ಲಿ ನಡೆಯಲಿದೆ.

Tags: