ಬೆಂಗಳೂರು: ಅಂಗನವಾಡಿಗಳಲ್ಲಿ ಮಕ್ಕಳಿಗೆ ನೀಡುತ್ತಿದ್ದ ಮೆನುವಿನಲ್ಲಿ ಬದಲಾವಣೆ ಮಾಡಲಾಗಿದೆ. ಅಪೌಷ್ಟಿಕತೆ ನೀಗಿಸಲು ಕ್ರಮ ಕೈಗೊಳ್ಳಲಾಗಿದ್ದು, ಹೆಚ್ಚುವರಿ ಗೋಧಿ, ಸಿರಿಧಾನ್ಯ ಲಾಡು, ಹೊಸ ತಿಂಡಿ ನೀಡಲಾಗುವುದು.
ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಕಳೆದ ವರ್ಷವೇ ಮೆನು ಬದಲಾವಣೆ ಮಾಡಿ ಪೌಷ್ಟಿಕ ಆಹಾರ ನೀಡುವಂತೆ ಹೈಕೋರ್ಟ್ ನೀಡಿದ ಆದೇಶ ಎತ್ತಿ ಹಿಡಿದಿತ್ತು.
ಐಸಿಡಿಎಸ್ ಯೋಜನೆಯಡಿ ಅಂಗನವಾಡಿ ಮಕ್ಕಳಿಗೆ ಹೊಸ ಮೆನು ನೀಡಲಾಗುತ್ತಿದೆ. ಅನ್ನ ಸಾಂಬಾರ್, ಅನ್ನ ಕಿಚಿಡಿ, ಉಪ್ಪಿಟ್ಟು ನೀಡುತ್ತಿದ್ದು, ಇದರೊಂದಿಗೆ ಹೆಚ್ಚುವರಿಯಾಗಿ 25 ಗ್ರಾಂ ತೂಕದ ಗೋಧಿ ಲಾಡು, ಸಿರಿ ಧಾನ್ಯದ ಲಾಡು ವಿತರಣೆ ಮಾಡಲಾಗುವುದು, ಪ್ರತಿ ಮಾನ್ಯ ಮಗುವಿಗೆ 8 ರೂಪಾಯಿ, ಅಪೌಷ್ಟಿಕ ಮಗುವಿಗೆ 12 ರೂಪಾಯಿ ವೆಚ್ಚವಾಗಲಿದೆ.
ಆರು ತಿಂಗಳಿಂದ ಮೂರು ವರ್ಷದ ಮಗುವಿಗೆ ಮನೆಯಲ್ಲಿಯೇ ತಿನ್ನಿಸಲು ಅನುಕೂಲವಾಗುವಂತೆ ಬೆಲ್ಲ ರಹಿತ ಮತ್ತು ಬೆಲ್ಲ ಸಹಿತವಾಗಿ ಸಿಹಿ ತಿಂಡಿ ನೀಡಲಾಗುವುದು ಎಂದು ಹೇಳಲಾಗಿದೆ.