ಬೆಂಗಳೂರು: ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ಅವರಿಂದು ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಅರಣ್ಯ ಇಲಾಖೆ ಸಭೆ ಆಯೋಜಿಸಿದ್ದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ಅವರು ಬೆಂಗಳೂರಿಗೆ ಆಗಮಿಸಿದ್ದರು.
ಸಭೆ ಆರಂಭವಾಗುವುದಕ್ಕೂ ಮುಂಚೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿದರು. ಈ ವೇಳೆ ಸಚಿವರಾದ ಜಮೀರ್ ಅಹಮ್ಮದ್ ಖಾನ್‌ರನ್ನು ಸಹ ಪವನ್ ಕಲ್ಯಾಣ್ ಭೇಟಿಯಾಗಿದ್ದರು.
ಡಿಸಿಎಂ ಆಗಿ ರಾಜಕೀಯ ಜಂಜಾಟದಲ್ಲಿರುವ ಪವನ್ ಕಲ್ಯಾಣ್‌ಗೆ ಸಿನಿಮಾದ ಹಲವು ಪ್ರಾಜೆಕ್ಟ್‌ಗಳು ಕೈ ಸೇರಿವೆ ಎನ್ನಲಾಗಿದ್ದು, ಹಲವು ಚಿತ್ರಗಳನ್ನು ಈಗ ಪವನ್ ಕಲ್ಯಾಣ್ ಪೂರ್ಣಗೊಳಿಸಬೇಕಿದೆ.
ಇಂದು ಸಿಎಂ ಸಿದ್ದರಾಮಯ್ಯರ ಭೇಟಿ ಸೌಹಾರ್ದಯುತವಾಗಿದ್ದು, ಯಾವುದೇ ರಾಜಕೀಯ ಇಲ್ಲ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.





