Mysore
14
overcast clouds

Social Media

ಶುಕ್ರವಾರ, 19 ಡಿಸೆಂಬರ್ 2025
Light
Dark

ನಾನು ಅಂತಾ ಚೀಪ್‌ ಕೆಲಸಕ್ಕೆ ಇಳಿಯಲ್ಲ: “ಎಚ್‌ಡಿಕೆ ವಿರುದ್ಧ ಡಿಕೆಶಿ” ಕಿಡಿ

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಎನ್ನಲಾದ ಅಶ್ಲೀಲ ವಿಡೀಯೋ ಕುರಿತು ಪೆನ್‌ಡ್ರೈವ್‌ ಹಂಚಿಕೆ ಹಿಂದೆ ಮಹಾನಾಯಕನ ಕೈವಾಡವಿದೆ ಎಂದು ಆರೋಪಿಸಿರುವ ಎಚ್‌.ಡಿ ಕುಮಾರಸ್ವಾಮಿ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಡಿಸಿಎಂ ಡಿ.ಕೆ ಶಿವಕುಮಾರ್‌, ನಾನು ಅಂತಾ ಚೀಪ್‌ ಕೆಲಸಕ್ಕೆ ಇಳಿಯಲ್ಲ. ನಾನೇನು ನನ್ನ ಬಳಿ ಪೆನ್‌ಡ್ರೈವ್‌ ಇದೆ ಎಂದು ಹೆದರಿಸಿದ್ದನಾ, ಇಂತಹ ಕೆಲಸ ನಮಗೆ ಅನವಶ್ಯಕ. ಚುನಾವಣೆಯನ್ನು ಎದುರಿಸುತ್ತೇವೆ, ನೇರವಾಗಿ ಅಸಂಬ್ಲಿಯಲ್ಲಿ ಚರ್ಚೆ ಮಾಡುತ್ತೇನೆ. ಇವರ ಚಟಕ್ಕೆ ವಿಡಿಯೋ ಮಾಡಿಕೊಳ್ಳುತ್ತಾರೆ. ಇಂಥವರನ್ನು ಭಗವಂತನೂ ಕ್ಷಮಿಸಲ್ಲ ಎಂದು ವಾಗ್ದಾಳಿ ನಡೆಸಿದರು.

ಇಂದಿನಿಂದಲ್ಲ, ಬಹಳ ವರ್ಷಗಳಿಂದಲೂ ಎಚ್.ಡಿ ಕುಮಾರಸ್ವಾಮಿ ಮತ್ತು ಕುಟುಂಬದವರಿಗೆ ನನ್ನನ್ನು ನೆನಪಿಸಿಕೊಂಡಿಲ್ಲ ಅಂದ್ರೆ ನಿದ್ದೆ ಬರಲ್ಲ. ಪ್ರಜ್ವಲ್‌ ಪ್ರಕರಣದಲ್ಲಿ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಪೆನ್‌ ಡ್ರೈವ್‌ ಪ್ರಕರಣವನ್ನು ಎಸ್‌ಐಟಿ ತನಿಖೆ ನಡೆಸುತ್ತಿದೆ. ಕಾನೂನು ಪ್ರಕಾರ ಎಲ್ಲವೂ ನಡೆಯಲಿದೆ ಎಂದರು.

ಪ್ರಜ್ವಲ್‌ ವಿದೇಶಕ್ಕೆ ಹೋಗುವಾಗ ಜೊತೆ ಇದ್ದವರು ಯಾರು? ಯಾರು ಯಾರಿಗೆ ಕರೆ ಮಾಡಿದ್ರು ಕೇಳಿ ಅವರಿಗೆ ಎಂದು ಎಚ್‌.ಡಿ ಕುಮಾರಸ್ವಾಮಿಗೆ, ಡಿಸಿಎಂ ಟಾಂಗ್‌ ಕೊಟ್ಟರು.

Tags:
error: Content is protected !!