Mysore
19
clear sky

Social Media

ಶುಕ್ರವಾರ, 30 ಜನವರಿ 2026
Light
Dark

ರಾಜ್ಯದ ಎಲ್ಲಾ ದೇವಾಲಯಗಳು ಸುರಕ್ಷಿತವಾಗಿದೆ: ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ಧರ್ಮಸ್ಥಳ ಅಷ್ಟೇ ಅಲ್ಲ, ರಾಜ್ಯದ ಎಲ್ಲಾ ದೇವಸ್ಥಾನಗಳು ಸುರಕ್ಷಿತವಾಗಿವೆ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದ ಪ್ರಕರಣದಲ್ಲಿ ಎಸ್‍ಐಟಿ ತನಿಖೆ ಮಾಡುತ್ತಿದ್ದು, ಸರಿಯಾದ ದಾರಿಯಲ್ಲೇ ಹೋಗುತ್ತಿದೆ. ಬಿಜೆಪಿಯವರು ಎನ್‍ಐಎ ತನಿಖೆಗೆ ವಹಿಸಿ ಎಂದು ಒತ್ತಾಯಿಸುತ್ತಿದ್ದಾರೆ. ಈ ಹಿಂದೆ ಸೌಜನ್ಯ ಪ್ರಕರಣದಲ್ಲಿ ಸಿಬಿಐ ತನಿಖೆ ಮಾಡಿತ್ತು. ಆಗ ಸೌಜನ್ಯಗೆ ಯಾಕೆ ನ್ಯಾಯ ಸಿಗಲಿಲ್ಲ? ಎಂದು ಪ್ರಶ್ನಿಸಿದರು.

ಬುರುಡೆ ಪ್ರಕರಣ ತಾರ್ಕಿಕ ಅಂತ್ಯಕ್ಕೆ ಬರಲಿದೆ ಎಂದ ಅವರು, ಅರಮನೆ ಮೈದಾನದಲ್ಲಿ ನಡೆಯಲಿರುವ ಈದ್‍ಮಿಲಾದ್ ಕಾರ್ಯಕ್ರಮ ವಿಚಾರದ ಬಗ್ಗೆ ನನಗೆ ಹೆಚ್ಚು ಮಾಹಿತಿ ಇಲ್ಲ. ಮೌಲ್ವಿಗಳು, ಪಾದ್ರಿಗಳು ಮಾಡುತ್ತಾರೆ. ಜನರಿಗೆ ಸನ್ಮಾರ್ಗದಲ್ಲಿ ಹೋಗಿ, ಜನರನ್ನು ಸರಿದಾರಿಗೆ ತನ್ನಿ ಎಂದು ಹೇಳುತ್ತಾರೆ. ಅವರು ಎಲ್ಲೂ ಬೇರೆಯದನ್ನು ಹೇಳಲ್ಲ. ಇದರಲ್ಲಿ ತಪ್ಪೇನಿದೆ? ಎಂದರು.

ಇದನ್ನು ಓದಿ:ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್‌ಗೆ ಕಾನೂನು ಸಂಕಷ್ಟ

ಕೇಂದ್ರದ ಸರ್ಕಾರದ ಜಿಎಸ್‍ಟಿ ಪರಿಷ್ಕರಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರ ಜಿಎಸ್‍ಟಿ ಜಾರಿಗೆ ತಂದು ಜನರಿಗೆ ಸಾಕಷ್ಟು ಹೊರೆ ಹಾಕಿತ್ತು. ಬಡವರು, ಮಧ್ಯಮವರ್ಗದವರಿಗೆ ಹೊರೆಯಾಗಿತ್ತು. ನಮ್ಮ ರಾಜ್ಯದಿಂದ 4.5 ಲಕ್ಷ ಕೋಟಿ ರೂ. ತೆರಿಗೆ ಹೋಗುತ್ತಿತ್ತು. ಆದರೂ ಅವರು ನಮಗೆ ಕೊಡುವುದು ಕಡಿಮೆ. ಜಿಎಸ್‍ಟಿ ಇಳಿಕೆಯಿಂದ ನಮಗೆ 15 ಸಾವಿರ ಕೋಟಿ ರೂ. ಕೊರತೆಯಾಗುತ್ತದೆ. ಇದನ್ನು ಕೇಂದ್ರ ಸರ್ಕಾರ ಕೊಡಬೇಕು ಎಂದು ಅವರು ಆಗ್ರಹಿಸಿದರು.

ನಮಗಷ್ಟೇ ಅಲ್ಲ. ಎಲ್ಲ ರಾಜ್ಯಗಳಿಗೂ ಕೊಡಬೇಕು. ಈಗ 1 ರೂ.ನಲ್ಲಿ 13 ಪೈಸೆ ಮಾತ್ರ ಕೊಡುತ್ತಿದೆ. ಅವರು ಹೆಚ್ಚು ತೆಗೆದುಕೊಳ್ಳುವ ತೆರಿಗೆಯಲ್ಲಿ ನಮಗೂ ಪಾಲು ಕೊಡಬೇಕು. ಜಿಎಸ್‍ಟಿ ಪರಿಷ್ಕರಣೆಯಿಂದ ಜನರಿಗೆ ಅನುಕೂಲ ಆಗುತ್ತದೆ. ಆದರೆ, ರಾಜ್ಯ ಸರ್ಕಾರಕ್ಕೆ ನಷ್ಟವಾಗುತ್ತದೆ. ನಮ್ಮಿಂದ ಹೆಚ್ಚುವರಿ ಸಂಗ್ರಹ ಮಾಡುತ್ತಿದ್ದರೂ ನಮಗೆ ಕೊಡುವುದು ಅತ್ಯಲ್ಪ ಎಂದು ಅವರು ಬೇಸರ ವ್ಯಕ್ತಪಡಿಸಿದರು.

Tags:
error: Content is protected !!