Mysore
29
light rain

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

2024ರ ಅಂತ್ಯಕ್ಕೆ ಎಲ್ಲಾ ರಸ್ತೆ ಕಾಮಗಾರಿಗಳೂ ಪೂರ್ಣ: ಕೇಂದ್ರ ಸಚಿವ ನಿತಿನ್ ಗಡ್ಕರಿ

ಮೈಸೂರು : ಕರ್ನಾಟಕದ ಅಭಿವೃದ್ಧಿಯು ಉತ್ತಮವಾಗಿದ್ದು, 4000 ಕೋಟಿಯ ಕಾಮಗಾರಿ ನಡೆಯುತ್ತಿದ್ದು, 2024 ರ ಅಂತ್ಯಕ್ಕೆ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳುತ್ತವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರಾದ ನಿತಿನ್ ಗಡ್ಕರಿ ಅವರು ಹೇಳಿದರು.

ಇಂದು (ಮಾ.೧೦) ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ರೂ.4000 ಕೋಟಿಗೂ ಅಧಿಕ ವೆಚ್ಚದ 266 ಕಿ.ಮೀ ಉದ್ದದ 22 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆಯ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ರಾಜ್ಯ ಸರ್ಕಾರದಿಂದ ಇತರೆ ರಸ್ತೆ ಕಾಮಗಾರಿಗಳ ಪ್ರಸ್ತಾವನೆ ನೀಡಿದ್ದು, ಇನ್ನಾವುದೇ ಪ್ರಸ್ತಾವನೆಗಳಿದ್ದಲಿ ಅವುಗಳನ್ನು ನೀಡಿದರೆ ಎಲ್ಲವನ್ನು ಪರಿಶೀಲಿಸಿ ಡಿ ಪಿ ಆರ್ ಮಾಡಲು ಒಪ್ಪಿಗೆ ನೀಡಲಾಗುವುದು ಎಂದರು.

ಕರ್ನಾಟಕ ಸಾಂಸ್ಕೃತಿಕ ನೆಲೆ ಬೀಡಾಗಿದ್ದು, ಇಲ್ಲಿನ ಸಾಹಿತ್ಯ,ಸಂಸ್ಕೃತಿ ಕರ್ನಾಟಕದ ಇತಿಹಾಸವನ್ನು ಬಿಂಬಿಸುತ್ತವೆ. ಇದೇ ಡಿಸೆಂಬರ್ ವೇಳೆಗೆ ಬೆಂಗಳೂರು ರಿಂಗ್ ರೋಡ್ ಕಾಮಗಾರಿ ಪೂರ್ಣಗೊಳ್ಳಲಿದ್ದು, ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಪರಿಹಾರ ಆಗಲಿದೆ. 2024 ರ ಅಂತ್ಯಕ್ಕೆ ಕರ್ನಾಟಕ ರಸ್ತೆಗಳ ಚಿತ್ರಣ ಬದಲಾಗಲಿದ್ದು, ಅಮೆರಿಕಾದ ರಸ್ತೆಗಳಿಗೆ ಸಮನಾಗಿ ಇರಲಿವೆ ಎಂದರು.

ಮುಂದಿನ ವರ್ಷದ ಜನವರಿ ಆರಂಭದಲ್ಲಿ ಬೆಂಗಳೂರು – ಚೆನೈ ಎಕ್ಸ್ಪ್ರೆಸ್ ಹೈವೇ ಕಾಮಗಾರಿ ಆರಂಭವಾಗಲಿದ್ದು, ಮೈಸೂರು – ಹಾಸನಕ್ಕೆ ರಿಂಗ್ ರಸ್ತೆ, ಕುಶಾಲನಗರ – ಮಾಣಿ ರಸ್ತೆಗೆ ಡಿ ಪಿ ಆರ್, ಮೈಸೂರು – ನಂಜನಗೂಡು ಆರು ಪಥದ ರಸ್ತೆ ನಿರ್ಮಾಣ, ಮಂಗಳೂರಿನ ವಿಕಾಸನಕ್ಕೆ ಗ್ರೀನ್ ಎಕ್ಸ್ಪ್ರೆಸ್ ನಿರ್ಮಾಣ ಮಾಡುವುದಾಗಿ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಸಂಸದರಾದ ಪ್ರತಾಪ್ ಸಿಂಹ, ಸುಮಲತಾ ಅಂಬರೀಶ್, ಮುನಿಸ್ವಾಮಿ, ಶಾಸಕರಾದ ಎಚ್.ಡಿ. ರೇವಣ್ಣ, ಎಚ್. ವಿಶ್ವನಾಥ್, ಸಿ.ಎನ್. ಮಂಜೇಗೌಡ, ಶ್ರೀವತ್ಸ, ಜಿ.ಡಿ. ಹರೀಶ್ ಗೌಡ ಉಪಸ್ಥಿತರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ