ಬೆಂಗಳೂರು: ಯಲಹಂಕದಲ್ಲಿ ನಡೆಯುತ್ತಿರುವ ಏರ್‌ಶೋ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಂದು 25ಕ್ಕೂ ಹೆಚ್ಚು ವಿಮಾನಗಳು ಹಾರಾಟ ನಡೆಸಲಿವೆ.
ಏರ್‌ಶೋನ ಎರಡನೇ ದಿನವಾದ ಇಂದು ಕೂಡ ವ್ಯವಹಾರ ಸಮ್ಮೇಳನ ನಡೆಯಲಿದೆ. ಭಾರತೀಯ ಸ್ಟಾರ್ಟ್ ಆಪ್ ಕಂಪನಿಗಳು ವಿದೇಶಿ ಪ್ರಮುಖರನ್ನು ಆಕರ್ಷಿಸಲಿವೆ.
ತುಮಕೂರಿನ ಎಚ್‌ಎಎಲ್ ಏಷ್ಯಾದ ಅತಿದೊಡ್ಡ ವಿಮಾನ ತಯಾರಿಕಾ ಕಾರ್ಖಾನೆಯತ್ತ ವಿದೇಶಿ ರಕ್ಷಣಾ ಅಧಿಕಾರಿಗಳ ಚಿತ್ತ ನೆಟ್ಟಿದೆ.
ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಉತ್ಪಾದನೆಗೊಳ್ಳುತ್ತಿರುವ ಉತ್ಪನ್ನಗಳ ಬಗ್ಗೆ ಜಗತ್ತಿನ್ ಮಾರುಕಟ್ಟೆಗೆ ಭಾರತೀಯ ಕಂಪನಿಗಳು ಪರಿಚಯಿಸಲಿವೆ.
ಇಂದು ಲಘು ಯುದ್ಧ ವಿಮಾನ, ಎಐ, ಫೈಟರ್ ಏರ್ ಕ್ರಾಫ್ಟ್, ಸೈಬರ್ ಸೆಕ್ಯುರಿಟಿ, ಡ್ರೋಣ್ ರೇಡಾರ್ಸ್ ಸೇರಿದಂತೆ ಅತ್ಯಾಧುನಿಕ ರಕ್ಷಣಾ ಉತ್ಪನ್ನಗಳ ಪ್ರದರ್ಶನ ನಡೆಯುತ್ತಿದೆ.
ಏರ್‌ಶೋನ್ ಎರಡನೇ ದಿನವನ್ನು ನೋಡಲು ರಕ್ಷಣಾ ಇಲಾಖೆ ಅಧಿಕಾರಿಗಳ ಕುಟುಂಬಗಳು ಹಾಗೂ ಗಣ್ಯರು ಯಲಹಂಕದ ವಾಯುನೆಲೆಗೆ ಆಗಮಿಸಿದ್ದು ವಿಶೇಷವೆನಿಸಿತ್ತು.





