Mysore
30
few clouds

Social Media

ಬುಧವಾರ, 18 ಫೆಬ್ರವರಿ 2026
Light
Dark

ಅಗ್ನಿವೀರ್‌ ನೇಮಕಾತಿಗೆ ಅರ್ಜಿ ಆಹ್ವಾನ

ಮೈಸೂರು: ಭಾರತೀಯ ವಾಯುದಳದಲ್ಲಿ ಅಗ್ನಿಪತ್ ಯೋಜನೆಯಡಿ ಅಗ್ನಿವೀರ್ ವಾಯು ಪ್ರವೇಶಕ್ಕೆ ಭಾರತೀಯ ಅರ್ಹ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಆಯ್ಕೆ ಪರೀಕ್ಷೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.

2004 ರ ಜುಲೈ 3 ರಿಂದ 2008 ರ ಮಾರ್ಚ್‌ 3 ರೊಳಗೆ ಜನಿಸಿದ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಪಿಯುಸಿಯಲ್ಲಿ ಪಾಸಾದವರು ಹಾಗೂ ಪಿಯುಸಿ ವಿಜ್ಞಾನದ ವಿಷಯದಲ್ಲಿ ಗಣಿತ, ಭೌತಶಾಸ್ತç, ಇಂಗ್ಲೀಷ್ ವಿಷಯಗಳಲ್ಲಿ ಕನಿಷ್ಟ ಶೇ.50 ಅಂಕ ಪಡೆದಿರಬೇಕು ಅಥವಾ 3 ವರ್ಷದ ಡಿಪ್ಲೋಮದಲ್ಲಿ ತೇರ್ಗಡೆ ಹೊಂದಿರಬೇಕು. ಅದರಲ್ಲಿ ಕನಿಷ್ಟ ಶೇ.50 ಅಂಕಗಳೊoದಿಗೆ ತೇರ್ಗಡೆ ಮತ್ತು ಇಂಗ್ಲೀಷ್‌ನಲ್ಲಿ ಕನಿಷ್ಟ ಶೇ.50 ಅಂಕಗಳೊoದಿಗೆ ತೇರ್ಗಡೆ ಹೊಂದಿರಬೇಕು ಅಥವಾ ಎರಡು ವರ್ಷಗಳ ವೃತ್ತಿಪರ ಶಿಕ್ಷಣದಲ್ಲಿ ಗಣಿತ, ಶಾಸ್ತ್ರ, ವಿಷಯಗಳಲ್ಲಿ ಕನಿಷ್ಟ ಶೇ.50 ಅಂಕ ಪಡೆದಿರಬೇಕು. ವಿಜ್ಞಾನೇತರ ವಿಷಯದಲ್ಲಿ ಪಿಯುಸಿಯ ಯಾವುದೇ ವಿಷಯದಲ್ಲಿ ಕನಿಷ್ಟ ಶೇ.50 ಅಂಕ ಪಡೆದಿರಬೇಕು. ಇಂಗ್ಲೀಷ್‌ನಲ್ಲಿ ಕನಿಷ್ಟ ಶೇ.50 ಅಂಕಗಳೊoದಿಗೆ ತೇರ್ಗಡೆ ಹೊಂದಿರುವವರು ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಳ್ಳಬೇಕಿದೆ.

ಪುರುಷ ಅಭ್ಯರ್ಥಿಗಳಿಗೆ ಎತ್ತರ 152.5 ಸೆಂ.ಮಿ, ತೂಕ ಎತ್ತರಕ್ಕೆ ಅನುಗುಣವಾಗಿರತಕ್ಕದ್ದು. ಎದೆಯ ಸುತ್ತಳತೆ 77ಸೆ.ಮಿ ಇರಬೇಕು. ಮಹಿಳಾ ಅಭ್ಯರ್ಥಿಗಳಿಗೆ ಎತ್ತರ 152 ಸೆಂ.ಮಿ ತೂಕ ಎತ್ತರಕ್ಕೆ ಅನುಗುಣವಾಗಿರತಕ್ಕದ್ದು. ಅರ್ಜಿ ಶುಲ್ಕ 250 ರೂ.ಗಳಾಗಿದ್ದು ಆನ್‌ಲೈನ್‌ನಲ್ಲಿ https://agnipathvayu.cdac.in ವೆಬ್‌ಸೈಟ್ ಮೂಲಕ ದಿನಾಂಕ 08-07-2024 ರಿಂದ 28-07-2024 ಅರ್ಜಿಸಲ್ಲಿಸಬಹುದಾಗಿದ್ದು, ಅಕ್ಟೋಬರ್ 18 ರಂದು ಆನ್‌ಲೈನ್ ಪರೀಕ್ಷೆ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಸಹಾಯಕ ನಿರ್ದೇಶಕರ ದೂ.ಸಂ: 0821-2489972 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:
error: Content is protected !!