Mysore
20
overcast clouds
Light
Dark

ಕೇರಳದಲ್ಲಿ ಆಫ್ರಿಕನ್‌ ಹಂದಿ ಜ್ವರ ಪತ್ತೆ; ಕರ್ನಾಟಕಕ್ಕೂ ಭಾರೀ ಆತಂಕ

ಕೇರಳ: ನೆರೆಯ ರಾಜ್ಯ ಕೇರಳದಲ್ಲಿ ಆಫ್ರಿಕನ್‌ ಹಂದಿ ಜ್ವರ ಪತ್ತೆಯಾಗಿದ್ದು, ಕರ್ನಾಟಕಕ್ಕೂ ಭಾರೀ ಆತಂಕ ಮನೆಮಾಡಿದೆ.

ಆಫ್ರಿಕನ್‌ ಹಂದಿಜ್ವರ ಅತ್ಯಂತ ಸಾಂಕ್ರಾಮಿಕ ಮತ್ತು ಮಾರಣಾಂತಿಕ ಹಂದಿ ಖಾಯಿಲೆಯಾಗಿದ್ದು, ಇದು ಕಾಡು ಹಂದಿಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ತ್ರಿಶೂರ್‌ ಜಿಲ್ಲೆಯ ಮಡಕ್ಕತಾರಾ ಪಂಚಾಯತ್‌ನ ಖಾಸಗಿ ಜಮೀನಿನಲ್ಲಿ ೩೧೦ ಹಂದಿಗಳನ್ನು ಕೊಲ್ಲಲು ಆದೇಶಿಸಲಾಗಿದೆ.

ಕೇರಳದಲ್ಲಿ ಹಂದಿ ರೋಗದ ಹಾವಳಿ ಹೆಚ್ಚಾಗಿದ್ದು, ಇದು ಹಂದಿಗಳಿಂದ ಜನರಿಗೆ ಹರಡುವುದಿಲ್ಲ. ಆದರೆ ಹಂದಿಗಳಿಗೆ ಬೇಗ ಹರಡುತ್ತದೆ. ಒಂದು ಹಂದಿಯಿಂದ ಮತ್ತೊಂದು ಹಂದಿಗೆ ಬೇಗ ಸೋಂಕು ಹರಡುವ ಕಾರಣ ೩೧೦ ಹಂದಿಗಳನ್ನು ಕೊಲ್ಲಲು ಆದೇಶ ಹೊರಡಿಸಲಾಗಿದೆ.

ಹಾನಿಗೊಳಗಾದ ಜಮೀನಿನ ಒಂದು ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ರೋಗ ಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ. ೧೦ ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ರೋಗ ಕಣ್ಗಾವಲು ಪ್ರದೇಶವೆಂದು ಘೋಷಿಸಲಾಗಿದೆ.

ತ್ರಿಶೂರ್‌ ಅಥವಾ ಇತರ ಪ್ರದೇಶಗಳಿಂದ ಹಂದಿಗಳನ್ನು ಅಕ್ರಮವಾಗಿ ಸಾಗಿಸುವುದನ್ನು ತಡೆಯಲು ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಿದೆ.